Select Your Language

Notifications

webdunia
webdunia
webdunia
webdunia

ಅಪ್ಪು ಪಪ್ಪು: ಚಿಂಪಾಂಜಿಯ ಮೋಡಿಗಾದರೂ ನೋಡಿ!

ಅಪ್ಪು ಪಪ್ಪು: ಚಿಂಪಾಂಜಿಯ ಮೋಡಿಗಾದರೂ ನೋಡಿ!
PR
ಅಪ್ಪು ಕೊಂಚ ಓವರ್ ಆಗಿ ಅಭಿನಯಿಸಿದ, ಪಪ್ಪು ಎಲ್ಲರಿಗೂ ಸಕತ್ ಮನರಂಜನೆ ನೀಡಿದ ಅನ್ನುವುದು ಅಪ್ಪು ಪಪ್ಪು ಬಗ್ಗೆ ಹೇಳಲೇ ಬೇಕು ಅನ್ನಿಸುವ ಮಾತುಗಳು.
ಅತಿ ಚಿಕ್ಕ ಬಾಲಕ ಅಸಾಧ್ಯ ಅನ್ನುವ ರೀತಿಯ ನಾಯಕನಂತೆ ಕಾಣಿಸುವುದು. ನೋಡಲು ಪುಟ್ಟ ಪೋರ, ಅವನಿಂದ ಭರ್ಜರಿ ಡಾನ್ಸ್, ಫೈಟ್, ಆಕ್ಷನ್, ಸ್ಟಂಟ್ ತೋರಿಸುವ ಮೂಲಕ ಎಲ್ಲೌ ಚಿತ್ರದ ಬದಲು ಮಗುವನ್ನು ಸೂಪರ್ ಮ್ಯಾನ್ ರೀತಿ ತೋರಿಸುವ ಯತ್ನ ಮಾಡಲಾಗಿದೆಯೇನೋ ಅಂತ ಚಿತ್ರ ನೋಡಿದಾಗ ಅನ್ನಿಸುತ್ತದೆ. ಆದರೆ ಮಾಸ್ಟರ್ ಸ್ನೇಹಿತ್‌ನ ಮುಗ್ಧ ನಗುವಿನ ಎದುರು ಎಲ್ಲವೂ ಮರೆತು ಹೋಗುತ್ತದೆ. ಜೊತೆಗೆ ಚಿಂಪಾಂಜಿಗಾಗಿ ಈ ಚಿತ್ರವೊಂದು ನೋಡಲೇಬೇಕಾದ ಚಿತ್ರ ಅಂದರೆ ತಪ್ಪಿಲ್ಲ.

ಚಿತ್ರದಲ್ಲಿ ಪೋರನ ಪಾತ್ರ ಕೊಂಚ ಓವರ್ ಅಗಿದೆ, ಹಾಸ್ಯ ಪಾತ್ರದಲ್ಲಿ ಕಾಣಿಸಿದ ಖಳನಟ ಕೋಮಲ್ ಸಹ ಒಂದು ಹಂತ ಕೊಂಚ ಓವರ್ ಅನ್ನಿಸಿದರೂ, ಮಕ್ಕಳು ನೋಡುವ ಚಿತ್ರದಲ್ಲಿ ಈ ರೀತಿಯ ಗಿಮಿಕ್ ಅತ್ಯಗತ್ಯ ಅನ್ನಿಸುತ್ತದೆ. ಚಿತ್ರ ನೋಡಲು ಮಕ್ಕಳೊಂದಿಗೆ ತೆರಳಿದಾಗ ಎಲ್ಲರೂ ಮಕ್ಕಳಂತೆಯೇ ಅಗಿ ಬಿಡುತ್ತಾರೆ. ಈ ಚಿತ್ರದಲ್ಲಿಯೂ ಅದೇ ಆಗಿದೆ. ಎಲ್ಲರೂ ಕೋಮಲ್‌ರನ್ನು ಮಕ್ಕಳಂತೆ ಕಂಡು ನಗುತ್ತಾರೆ.

ಮಕ್ಕಳ ಚಿತ್ರ ಅನ್ನುವ ರೀತಿ ಇದನ್ನು ನೋಡಲಾಗದು. ಸಂಪೂರ್ಣ ಮಕ್ಕಳ ಚಿತ್ರವಾಗಿಯೂ ಕಾಣದೇ, ಪ್ರಬುದ್ಧರ ಚಿತ್ರದ ಮನ್ನಣೆಯನ್ನೂ ಗಳಿಸದೇ ಮುಂದೆ ಸಾಗುತ್ತದೆ. ಒಂದೆಡೆ ಮನರಂಜನೆ ಅನ್ನಿಸಿದರೆ, ಇನ್ನೊಂದೆಡೆ ಅತಿಯಾಯಿತು ಅಂತಲೂ ಭಾಸವಾಗುತ್ತದೆ. ಮಕ್ಕಳ ರೀತಿ ನೋಡಿದರೆ ಚಿತ್ರ ಉತ್ತಮವಾಗಿದೆ.

ಚಿತ್ರದಲ್ಲಿ ದೇಶ, ವಿದೇಶದ ಉತ್ತಮ ತಾಣಗಳನ್ನು ತೋರಿಸಲಾಗಿದೆ. ವಿಚ್ಛೇದಿತರಾದ ತಂದೆ ತಾಯಿಯನ್ನು ಒಂದು ಗೂಡಿಸಲು ಮಗ ಯತ್ನಿಸುವುದು, ನಡುವೆ ಬರುವ ಆತಂಕವನ್ನು ನಾಯಕ ನಟನಂತೆ ಎದುರಿಸಿ ಗೆಲ್ಲುವುದು ಇವೆಲ್ಲಾ ಚಿತ್ರದಲ್ಲಿದೆ.

ಚಿತ್ರದಲ್ಲಿ ನಿರ್ದೇಶಕ ಅನಂತರಾಜು ಪಾತ್ರ ಅಪಾರವಾಗಿದೆ. ಒರಂಗಟಾನ್ ಚಿಂಪಾಂಜಿಯಿಂದ ಕೆಲಸ ತೆಗೆಸಿದ್ದರಲ್ಲಿ ಇವರು ಮೆಚ್ಚುಗೆ ಪಡೆಯುತ್ತಾರೆ. ಚಿತ್ರದ ಎಲ್ಲಾ ಮನುಷ್ಯ ಪಾತ್ರಧಾರಿಗಿಂತ ಈ ಪಾತ್ರದಾರಿ ಉತ್ತಮವಾಗಿದೆ ಅಂತ ಅನ್ನಿಸುವುದು ಸುಳ್ಳಲ್ಲ. ಮನುಷ್ಯರ ಮಾದರಿಯಲ್ಲಿ ಇದು ನಟಿಸಿದೆ.

ಚಿತ್ರದ ಮೊದಲಾರ್ಧಕ್ಕಿಂತ ಎರಡನೇ ಅರ್ಧ ಪರವಾಗಿಲ್ಲ ಅನ್ನುವ ಹೊತ್ತಿಗೆ ಚಿತ್ರ ಮುಗಿದು ಹೋಗುತ್ತದೆ. ಕಡಿಮೆ ಬಜೆಟ್ ಚಿತ್ರಗಳು ಗೆಲ್ಲುತ್ತಿರುವ ಈ ದಿನದಲ್ಲಿ ಅಧಿಕ ಹಣ ಹೂಡಿ ಚಿತ್ರ ನಿರ್ಮಿಸಿ ಕೈ ಸುಟ್ಟುಕೊಳ್ಳುತ್ತಾರೆ ಅನ್ನಿಸುತ್ತದೆ ನಿರ್ಮಪಕರು. ಚಿತ್ರದಲ್ಲಿ ಎರಡು ಹಾಡು ಪರವಾಗಿಲ್ಲ ಅನ್ನಿಸುತ್ತದೆ. ಉಳಿದದ್ದೆಲ್ಲಾ ಸಪ್ಪೆ ಸಪ್ಪೆ. ಹಂಸಲೇಖ ಹೀಗೇಕಾದರು ಅಂತ ಅನ್ನಿಸುತ್ತದೆ. ತಂದೆಯ ಪಾತ್ರದಲ್ಲಿ ಅಬ್ಬಾಸ್, ತಾಯಿಯಾಗಿ ರೇಖಾ ಜೋಡಿ ಪರವಾಗಿಲ್ಲ. ಜೆನ್ನಿಫರ್ ಕೊತ್ವಾಲ್ ಏಕೆ ಇದ್ದಾರೆ ಅನ್ನುವುದು ಕೊನೆಯವರೆಗೂ ಅರ್ಥ ಆಗುವುದಿಲ್ಲ. ಕೋಮಲ್, ರಾಜು ತಾಳಿಕೋಟೆ ಅತಿಯಾಗಿ ನಗಿಸುತ್ತಾರೆ. ರಾಮ್ ನಾರಾಯಣ್ ಸಂಭಾಷಣೆ, ಎಸ್. ಕೃಷ್ಣ ಛಾಯಾಗ್ರಹಣ ಪರವಾಗಿಲ್ಲ. ಒಟ್ಟಾರೆ, ಚಿತ್ರವನ್ನು ಒರಾಂಗುಟನ್ ಚಿಂಪಾಂಜಿಗಾಗಿ ನೋಡಬಹುದು. ಹಾಗಾಗಿ ನಿಮ್ಮ ಮಕ್ಕಳಿಗೂ ತೋರಿಸಬಹುದು.

Share this Story:

Follow Webdunia kannada