ತಾರಾಗಣ : ಕಾಶಿನಾಥ್, ಅರ್ಪಿತ, ಸತ್ಯರಾಜ್, ಟೆನ್ನಿಸ್ ಕೃಷ್ಣ
ನಿರ್ದೇಶನ: ಕಾಶಿನಾಥ್
ಕಾಶಿನಾಥ್ ಚಿತ್ರ ಎಂದಾಕ್ಷಣ ಅವರ ಹಿಂದಿನ ಚಿತ್ರಗಳಲ್ಲಿನ ಸನ್ನಿವೇಶಗಳು ನಮ್ಮ ಕಣ್ಣುಮುಂದೆ ನಿಲ್ಲುತ್ತವೆ.
ನಿರೀಕ್ಷೆಯಂತೆ ತಮ್ಮ ಚಿತ್ರಗಳಲ್ಲಿ ಸನ್ನಿವೇಶಗಳನ್ನು ಹೋಲುವ ಅನೇಕ ಸನ್ನಿವೇಶಗಳು ಅಪ್ಪಚ್ಚಿಯಲ್ಲಿವೆ. ಯಾವುದೇ ವಸ್ತು ಅಪ್ಪಚ್ಚಿಯಾದರೆ ಅದರ ಒರಿಜಿನಲ್ ಶೇಪ್ ಕೆಟ್ಟು ಹೋಗುತ್ತದೆ.
ಅದೇ ರೀತಿ ಅಪ್ಪಚ್ಚಿ ಎಂದು ಹೆಸರಿರುವ ಈ ಚಿತ್ರವೂ ಅದೇ ಶೇಪ್ ಲೆಸ್ ಆಗಿದೆ. ಈ ಚಿತ್ರದಲ್ಲಿ ನರಸಿಂಹ (ಕಾಶಿನಾಥ್) ಒಂದು ಬ್ಲೇಡ್ ಕಂಪೆನಿಯ ಮುಖ್ಯಸ್ಥ. ಆತ ಯುವತಿಯರನ್ನು ಕಂಡ ತಕ್ಷಣ ಅವರೊಂದಿಗೆ ಇರುವಂತೆ ಕನಸು ಕಾಣುತ್ತಾನೆ. ತಕ್ಷಣ ಅವರ ದಿವಂಗತ ಪತ್ನಿಯ ಮುಖ ಕಣ್ಣುಮುಂದೆ ನಿಲ್ಲುತ್ತದೆ. ನರಸಿಂಹನನ್ನೇ ಮದುವೆಯಾಗುವೆ ಆಸೆಯೊಂದಿಗೆ ಬಹಳಷ್ಟು ಗಂಡುಗಳನ್ನು ತಿರಸ್ಕರಿಸಿದ್ದ ಅವರ ಮಾವನ ಮಗಳು ರಾಗಿಣಿ (ಅರ್ಪಿತ)ನನ್ನೇ ಮದುವೆಯಾಗುತ್ತಾರೆ.
ಅವರ ಪುರುಷತ್ವದ ಬಗ್ಗೆ ಪ್ರಶ್ನಿಸಿದವರಿಗೆ ಕಾಶಿನಾಥ್ ತನ್ನ ಸಣಕಲು ದೇಹ ತೋರಿಸಿ ನಾನು ನರಸಿಂಹ ಎಂದು ಬೀಗುತ್ತಾನೆ. ಈ ಚಿತ್ರ ನೊಡಿದವರೂ ಅಪ್ಪಚ್ಚಿಯಾಗುವ ಅಪಾಯವಿದೆ. ಸದಭಿರುಚಿಯ ಚಿತ್ರಗಳನ್ನು ನೋಡ ಬಯಸುವವರಿಗೆ ಈ ಚಿತ್ರ ಹಿಡಿಸುವುದಿಲ್ಲ.