Article Kannada Cinema Review %e0%b2%85%e0%b2%a8%e0%b2%be%e0%b2%a5%e0%b2%a8%e0%b2%be%e0%b2%a5 %e0%b2%89%e0%b2%aa%e0%b3%87%e0%b2%82%e0%b2%a6%e0%b3%8d%e0%b2%b0%e0%b2%a8%e0%b2%be%e0%b2%a5 107092100005_1.htm

Daily Horoscope

Select Your Language

Notifications

webdunia
webdunia
webdunia
webdunia

ಅನಾಥನಾಥ ಉಪೇಂದ್ರನಾಥ

ಅನಾಥನಾಥ
ಇತ್ತೀಚೆಗೆ ತಾನೇ ಬಿಡುಗಡೆಯಾದ ಚಿತ್ರ ಅನಾಥರು ಒಂದು ಉತ್ತಮ ಚಿತ್ರ. ಮೂಲ ತಮಿಳಿನ ಪಿತಾಮಗ ಚಿತ್ರವನ್ನು ಆಧರಿಸಿದ್ದಾದರೂ ಕನ್ನಡದಲ್ಲಿ ತನ್ನದೇ ಆದ ಛಾಪಿನಿಂದ ಗುರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸಾಧುಕೋಕಿಲರ ರಕ್ತ ಕಣ್ಣೀರು ಯಶಸ್ವಿಯಾದ ನಂತರ ಅವರ ಗಮನವೆಲ್ಲಾ ರೀಮೇಕ್ ಚಿತ್ರಗಳತ್ತಲೇ ಸಾಗಿದೆ. ರೀಮೇಕ್ ರಾಜ ಎನ್ನುವಷ್ಟರ ಮಟ್ಟಿಗೆ ಪ್ರತಿಯೊಂದು ಫ್ರೇಂ ತುಣಕುಗಳನ್ನು ಬಿಡದಂತೆ ಅಚ್ಚಿಳಿಸುವ ಅವರ ಸಾಮರ್ಥ್ಯ ತಲೆದೂಗುವಂಥದ್ದು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲೇ ಇರುವ ತಂತ್ರಜ್ಞರು ಹಾಗೂ ನಟರ ಕೈಯಲ್ಲಿ ದುಡಿಸಿಕೊಳ್ಳಬಲ್ಲ ಸಾಧುಕೋಕಿಲರ ಚಾಕಚಕ್ಯತೆ ಒಬ್ಬ ನಿರ್ದೇಶಕನ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಾಧಾರಣವಾಗಿ ತಮ್ಮ ಡೈಲಾಗ್ ಡೆಲಿವೆರಿ, ವಿಚಿತ್ರವಾದ ವಸ್ತ್ತ್ರ ವಿನ್ಯಾಸಗಳಿಂದ ಮನಸೆಳೆಯುವ ಉಪೇಂದ್ರರವರು ಈ ಚಿತ್ರದಲ್ಲಿ ಹೆಚ್ಚಾಗಿ ಮೌನಕ್ಕೇ ಶರಣಾಗಿದ್ದಾರೆ.

ಮತ್ತೊಬ್ಬ ನಾಯಕ ನಟ ದರ್ಶನ್ ಸಾಧಾರಣವಾಗಿ ಕೈಕಾಲುಗಳು ನಿಲ್ಲುವುದೇ ಕಷ್ಟ. ತಲೆ ಕುಣಿಸುತ್ತಾ, ಸೊಂಟ ತಿರುಗಿಸುತ್ತಾ, ಮೈ ಬೆವರಿಳಿಸಿಕೊಳ್ಳುತ್ತಾ, ಹುಚ್ಚಾಪಟ್ಟೆ ಕೈಕಾಲುಗಳನ್ನು ಅದುರಿಸಿಕೊಳ್ಳುತ್ತಾ ಅರಚುವ ಆ ದರ್ಶನ್ ಇವನೇನಾ ಎನ್ನುವಷ್ಟರ ಮಟ್ಟಿಗೆ ಒಬ್ಬ ಮೋಸಗಾರನ ಪಾತ್ರದಲ್ಲಿ ನೋಡಬಹುದು.

ರಂಭಾ ಮತ್ತು ಉಪೇಂದ್ರರ ಜೋಡಿಯ ಐಟಂ ಹಾಡು ಚೆನ್ನಾಗಿ ಕಂಪೋಸ್ ಆಗಿದ್ದು ಕ್ಯಾಮರಾಮೆನ್ ಕೃಷ್ಣಕುಮಾರ್j ಚಾಕಚಕ್ಯತೆ ತಲೆದೂಗುವಂತಿದೆ.

ಚಿತ್ರಕಥೆಯು ರುದ್ರ ಮತ್ತು ಸತ್ಯ ಹಾಗೂ ಗಾಂಜ ಪಾರ್ವತಿಯ ಸುತ್ತಣ ತಿರುಗುತ್ತದೆ. ಮೂರು ವಿಭಿನ್ನ ಪಾತ್ರಗಳು ಮೂರು ದಿಕ್ಕಿನಲ್ಲಿ ಸಾಗುತ್ತಿದ್ದರೂ ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ಸಫಲವಾಗುತ್ತದೆ.

ಏಕಾಂತ ಪ್ರಿಯ ರುದ್ರ ಒಂದೆಡೆಯಾದರೆ, ಜನರನ್ನ ಮೋಸಗೊಳಿಸ ಬಲ್ಲ ಚತುರ ಸತ್ಯ ಮಗದೆಡೆ, ಗಾಂಜಾ ತೋಟದಲ್ಲಿ ಕೆಲಸ ಮಾಡುವ ಗಾಂಜಾ ಪಾರ್ವತಿಯದು ಮತ್ತೊಂದು ಕಥೆ. ಒಮ್ಮೆ ಗಾಂಜಾ ಫಾರಂನಲ್ಲಿ ಅಚಾನಕ್ಕಾಗಿ ರುದ್ರನನ್ನು ಗಾಂಜಾ ಪಾರ್ವತಿ ಭೇಟಿಯಾಗುತ್ತಾಳೆ ಹಾಗೂ ರುದ್ರನಿಗೆ ಆಶ್ರಯವನ್ನೀಯುತ್ತಾಳೆ. ಆದರೆ ರುದ್ರನನ್ನು ಪೋಲೀಸರು ಬಂಧಿಸಿ ಜೈಲಿಗಟ್ಟುತ್ತಾರೆ.

ಜೈಲಿನಲ್ಲಿ ಸತ್ಯನನ್ನು ಭೇಟಿಯಾದ ರುದ್ರನಿಗೂ ಅವನಿಗೂ ಸ್ನೇಹ ಬಂಧನವಾಗುತ್ತದೆ. ಕೊನೆಗೊಮ್ಮೆ ರುದ್ರನಿಗೆ ತಾನೇನು ಮಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದೆ ಯಜಮಾನನ ಅಣತಿಯಂತೆ ಗಾಂಜಾ ತೋಟದಲ್ಲಿ ಕೆಲಸ ಮಾಡ ತೊಡಗುತ್ತಾನೆ. ಆದರೆ ಮುಗ್ಧ ರುದ್ರನನ್ನು ಕೊಲೆ ಕೇಸೊಂದರಲ್ಲಿ ಬಲವಂತವಾಗಿ ಸಿಲುಕಿಸಿದಾಗ ಸತ್ಯ ಅವನಿಗೆ ಬೆನ್ನೆಲುಬಾಗಿ ನಿಂತು ಕಾಪಾಡುತ್ತಾನೆ,

ಆಮೇಲೆಲ್ಲಾ ಚಿತ್ರದ ತುಂಬಾ ರಕ್ತದ ಕೋಡಿ, ಹಿಂಸೆ, ಕ್ರೌರ್ಯ, ಭಾವನೆಗಳ ರುದ್ರನರ್ತನವೇ ಪ್ರಮುಖ ಅಂಶಗಳಾಗುತ್ತದೆ.

ಚಿತ್ರದುದ್ದಕ್ಕೂ ಉಪೇಂದ್ರರ ಮುಖ ಭಾವಗಳು, ನಟನಾ ಭಾವ ಮನ ಸೆಳೆಯುತ್ತದೆ. ಅತಿಯಾದ ಕ್ರಾಂತಿಯನ್ನು ಉಪೇಂದ್ರರ ವ್ಯಕ್ತಿತ್ವದಲ್ಲಿ ತೋರಿಸಿದರೂ ಸಹ ಅವರ ಸಹಜ ಅಭಿನಯ ಪ್ರೇಕ್ಷಕರನ್ನು ಭಾವಪೂರ್ಣವಾಗಿಸುತ್ತದೆ. ದರ್ಶನ್ ತನ್ನ ಹಾಸ್ಯ ಪ್ರವೃತ್ತಿಯಿಂದ ಜನರನ್ನೂ ರಂಜಿಸಿದರೂ ಸಹ ಅವನ ಪಾತ್ರಕ್ಕೆ ಮತ್ತೂ ಒತ್ತು ಕೊಡುವಲ್ಲಿ ಸೋತಿದ್ದಾನೆಂದು ಅನಿಸದಿರಲಾರದು.

ರಾಧಿಕಾಳ ಪಾತ್ರ ಅಷ್ಟೇನು ಹೇಳಿಕೊಳ್ಳದಂತಿಲ್ಲದಿದ್ದರೂ ಗಾಂಜಾ ಪಾರ್ವತಿಯಾಗಿ ಸಾಂಘ್ವಿಯ ಅಭಿನಯ ಮನೋಜ್ಞವಾಗಿದೆ. ಇನ್ನು ರಂಭ ಐಟಂಸಾಂಗಿಗಷ್ಟೇ ಸೀಮಿತವಾಗಿದ್ದಾಳೆ. ಇದುವರೆಗೂ ಸೋಲಿನ ಸುರುಳಿಯಲ್ಲಿ ಅನಾಥನಾಗಿ ಹೋಗಿದ್ದ ಉಪೇಂದ್ರ ತನ್ನ ಪ್ರೌಢ ಅಭಿನಯದಿಂದಾಗಿ ಮತ್ತೆ ಮೇಲೆದ್ದು ಬಂದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Share this Story:

Follow Webdunia kannada