Select Your Language

Notifications

webdunia
webdunia
webdunia
webdunia

ಅಂಜದಿರು

ಅಂಜದಿರು
ಚಿತ್ರ ವಿಮರ್ಶೆ: ಅಂಜದಿರು

ನಿರ್ದೇಶನ: ಜನಾರ್ದನ್

ತಾರಾಗಣ: ಪ್ರಶಾಂತ್, ಮುರಳೀಧರ್, ಶುಭಾಪೂಂಜಾ

ತಮಿಳಿನ ಅಂಜದೇ ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ ನಿರ್ದೇಶಕ ಜನಾರ್ದನ್. ಮೂಲ ಚಿತ್ರ ನೋಡಿ ಅಂಜದಿರು ನೋಡಿದರೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಆದರೆ ನಿರ್ದೇಶಕರು ಕತೆಯ ಆಯ್ಕೆಯಲ್ಲಿ ಎಡವಿದ್ದಾರೆ.

ಚಿತ್ರದ ಕತೆಯಲ್ಲಿ ಗಟ್ಟಿತನವಿಲ್ಲ. ಚಕಚಕನೇ ಓಡುವ ಎಡಿಟಿಂಗ್ ಇಲ್ಲ. ಪ್ರೇಕ್ಷಕರು ಬಯಸುವ ರುಚಿ ಚಿತ್ರದಲ್ಲಿ ಕಳೆದುಹೋದಂತೆ ಭಾಸವಾಗುತ್ತದೆ. ಕಿಲ ಕಿಲ ನಗಿಸುವ ದೃಶ್ಯಗಳು ಚಿತ್ರದಲ್ಲಿ ಕಾಣುತ್ತಿಲ್ಲ. ಮುಖ್ಯವಾಗಿ ಚಿತ್ರದಲ್ಲಿ ಮನರಂಜನೆ ಇಲ್ಲದಿರುವುದು ಚಿತ್ರದ ನೆಗೆಟಿವ್ ಪಾಯಿಂಟ್.

ಒಂದು ಚಿತ್ರವನ್ನು ರೀಮೇಕ್ ಮಾಡುವಾಗ ಅದರಲ್ಲಿನ ತಪ್ಪುಗಳನ್ನು ಇಲ್ಲಿ ತೋರಿಸುವುದು ನಿರ್ದೇಶಕರು ಮಾಡಿದ ದೊಡ್ಡ ತಪ್ಪು.

ಉಳಿದಂತೆ ಚಿತ್ರದಲ್ಲಿ ಪ್ರಶಾಂತ್ ಅಭಿನಯದಲ್ಲಿ ಸುಧಾರಣೆಯಾಗಿದೆ. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಮುರಳೀಧರ್ ಬೆರಗು ಮೂಡಿಸುವಂತೆ ಅಭಿನಯಿಸಿದ್ದಾರೆ. ಶುಭಾ ಪೂಂಜಾ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿದ್ದಾರೆ. ಬಹಳ ವರ್ಷಗಳ ನಂತರ ದ್ವಾರಕೀಶ್ ಖಳನಾಯಕನಾಗಿ ನಟಿಸುತ್ತಿದ್ದರೂ, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸುಮನ್ ರಂಗನಾಥ್ ಐಟಂ ಸಾಂಗ್‌ನಲ್ಲಿ 20ರ ಹುಡುಗಿಯಂತೆ ಅಭಿನಯಿಸಿದ್ದಾರೆ.

Share this Story:

Follow Webdunia kannada