Daily Horoscope
✕

ವಿಕ್ರಾಂತ್ ರೋಣ ಸಿನಿಮಾ ಹೇಗಿದೆ? ಫಸ್ಟ್ ಡೇ ಫಸ್ಟ್ ಶೋ ಬಳಿಕ ಇಲ್ಲಿದೆ ವಿಮರ್ಶೆ

Webdunia
ಗುರುವಾರ, 28 ಜುಲೈ 2022 (09:30 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅದೂ ಭರ್ಜರಿಯಾಗಿ ಎನ್ನುತ್ತಿದ್ದಾರೆ ಸುದೀಪ್ ಫ್ಯಾನ್ಸ್. ವಿಕ್ರಾಂತ್ ರೋಣ ಮೊದಲ ದಿನದ ಮೊದಲ ಶೋ ನೋಡಿದ ಬಳಿಕ ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

ಈ ಮೂಲಕ ಪ್ಯಾನ್ ಇಂಡಿಯಾ ಹಿಟ್ ಸಿನಿಮಾಗಳ ಸಾಲಿಗೆ ವಿಕ್ರಾಂತ್ ರೋಣ ಸೇರ್ಪಡೆಯಾಗಲಿದೆ ಎನ್ನುತ್ತಿದ್ದಾರೆ. ಇಡೀ ಸಿನಿಮಾದಲ್ಲಿ ಸುದೀಪ್ ಆವರಿಸಿಕೊಂಡಿದ್ದಾರೆ. ಅವರ ಆಕ್ಷನ್, ಥ್ರಿಲ್ಲಿಂಗ್ ಕತೆ ಜೊತೆಗೆ 3ಡಿ ಇಫೆಕ್ಟ್ ನಲ್ಲಿ ನೋಡುವ ಮಜಾ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದಿದೆ.

ಕತೆಗೆ ತಕ್ಕ ಹಿನ್ನಲೆ ಸಂಗೀತಕ್ಕೆ ಫುಲ್ ಮಾರ್ಕ್ಸ್ ನೀಡುವಂತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಕತೆ ಸಾಗುತ್ತದೆ. ಕೆಲವು ದೃಶ್ಯಗಳು ಅನಗತ್ಯ ಎನಿಸಿದರೂ ಅದನ್ನು ನಿರ್ದೇಶಕರು ಬೇಗನೇ ಮರೆಸಿಬಿಡುತ್ತಾರೆ. ಕತೆ, ಸ್ಕ್ರೀನ್ ಪ್ಲೇ, ಸಂಗೀತದ ಜೊತೆಗೆ ಕ್ಯಾಮರಾ ಕೈಚಳಕವೂ ಅತ್ಯುತ್ತಮವಾಗಿದೆ.  ಎರಡನೇ ಭಾಗ ಪ್ರೇಕ್ಷಕರನ್ನು ಮತ್ತಷ್ಟು ಕುತೂಹಲದಲ್ಲಿರಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ 3 ಡಿ ವರ್ಷನ್ ನಲ್ಲಿ ಬಂದ ಅತ್ಯುತ್ತಮ ಸಿನಿಮಾಗಳಲ್ಲಿ ಇದೂ ಕೂಡಾ ಒಂದಾಗಲಿದೆ ಎನ್ನಬಹುದು. 3 ಡಿ ಇಫೆಕ್ಟ್, ಹಿನ್ನಲೆ ಸಂಗೀತದ ಇಫೆಕ್ಟ್ ಜೊತೆಗೆ ಸಿನಿಮಾದ ಮಜಾ ಪಡೆಯಬೇಕೆಂದರೆ ಥಿಯೇಟರ್ ಗೇ ಹೋಗಿ ವೀಕ್ಷಿಸುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಕಿಚ್ಚನ ಬುದ್ಧಿ ಮಾತಿಗೂ ಬೆಲೆ ಇಲ್ಲ.. ವೀಕೆಂಡ್ ನಲ್ಲಿ ತಪ್ಪಾಯ್ತು ಎನ್ನೋದು, ಗೇಮ್ ನಲ್ಲಿ ಮತ್ತದೇ ತಪ್ಪು ಮಾಡೋದು

ವೀಕೆಂಡ್‌ನಲ್ಲಿ 'ಪ್ರೇಮದ ಊರಲಿ' ಮ್ಯಾಜಿಕ್, ಟಿಕೆಟ್‌ಗಳೆಲ್ಲ ಸೋಲ್ಡ್ ಔಟ್: ಇದುವರೆಗೆ ಗಳಿಸಿದ್ದೆಷ್ಟು

Video: ಎಂಥಾ ಅಭಿಮಾನಿಗಳೂ ಇರ್ತಾರಪ್ಪಾ.. ಬರ್ತ್ ಡೇಗೆ ವಿಶ್ ಮಾಡಲು ಬಂದು ರಚಿತಾ ರಾಮ್ ಗೆ ಅಭಿಮಾನಿ ಹೀಗೆ ಮಾಡೋದಾ

BBK13: ಕಳೆದ ವಾರ ಕಿಚ್ಚನ ಚಪ್ಪಾಳೆ.. ಆದ್ರೆ ಈ ವಾರ ಆಸಿಯಾಗೆ ಏನು ಕಿಚ್ಚನಿಂದ ಏನು ಕಾದಿದ್ಯೋ

ಬಿಗ್ ಸ್ಟಾರ್ಸ್‌ ಇಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಗಿಟ್ಟಿಸಿತು ಸಕ್ಸಸ್: ಪ್ರೇಮದ ಊರಲಿ ಚಿತ್ರಕ್ಕೆ ಪ್ರೇಕ್ಷಕರು ಫಿದಾ

ಮುಂದಿನ ಸುದ್ದಿ
Show comments