ಶಿಕಾರಿ ವಿಮರ್ಶೆ; ಕಳೆದು ಹೋದ ಪುಟಗಳಲ್ಲಿ...
ಚಿತ್ರ: ಶಿಕಾರಿತಾರಾಗಣ: ಮಮ್ಮುಟ್ಟಿ, ಪೂನಂ ಬಾಜ್ವಾ, ಅಚ್ಚುತ ಕುಮಾರ್, ಶರತ್ ಲೋಹಿತಾಶ್ವನಿರ್ದೇಶನ: ಅಭಯ್ ಸಿಂಹಸಂಗೀತ: ವಿ. ಹರಿಕೃಷ್ಣಪ್ರೇಕ್ಷಕರು ನೋಡುವ ಸಿನಿಮಾ ಮಾಡುವುದು ಬೇರೆ, ಪ್ರೇಕ್ಷಕರು ನೋಡಬೇಕು ಎಂದು ಸಿನಿಮಾ ಮಾಡುವುದು ಬೇರೆ; ಮೊದಲ ಆಯ್ಕೆಯಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುವ ಉದ್ದೇಶವಷ್ಟೇ ಇರುತ್ತದೆ. ಎಲ್ಲಾ ಕ್ರೌರ್ಯಗಳನ್ನು ಹೇಳಿ ಮುಗಿಸಿದ ನಂತರ, ಮಸಾಲೆಗಳು ಮುಗಿದ ನಂತರ ಚರಮ ಸಂದೇಶ.ಅಭಯ್ ಸಿಂಹ ನಿರ್ದೇಶನದ 'ಶಿಕಾರಿ' ಮೊದಲನೆಯ ಗುಂಪಿಗೆ ಸೇರಿದ ಸಿನಿಮಾ ಖಂಡಿತಾ ಅಲ್ಲವೇ ಅಲ್ಲ. ಆದರೆ ಎರಡನೇ ಗುಂಪಿಗೂ ಸೇರುತ್ತಿಲ್ಲ ಅನ್ನೋದು ಮಾತ್ರ ನೋವಿನ ಸಂಗತಿ. ಆದರೂ ಅವರ ಪ್ರಯತ್ನವನ್ನು ಮೆಚ್ಚಲೇ ಬೇಕು. ಕೆ. ಮಂಜು ಅವರಂತಹ ನಿರ್ಮಾಪಕ, ಮಮ್ಮುಟ್ಟಿ ಅವರಂತಹ ಸ್ಟಾರ್ ನಟರು ಕಲಾತ್ಮಕ ಚಿತ್ರಗಳಿಗಷ್ಟೇ ಒಗ್ಗುವವರಲ್ಲ ಅನ್ನೋದನ್ನು ಮನದಟ್ಟು ಮಾಡಿಕೊಂಡು ನಿರ್ದೇಶನ ಕೊನೆಗೆ ಹೀಗಾಗಿರಬಹುದು ಎಂದು ಅರ್ಥೈಸಲು ಸಾಕಷ್ಟು ಅವಕಾಶಗಳಿವೆ.
ಅಭಿಜಿತ್ (ಮಮ್ಮುಟ್ಟಿ) ಸಾಫ್ಟ್‌ವೇರ್ ಇಂಜಿನಿಯರ್. ಕಾದಂಬರಿ ಓದುತ್ತಾ ಕಳೆದು ಹೋದ ಪುಟಗಳ ಹುಡುಕಾಟಕ್ಕೆ ಎಲ್ಲವನ್ನೂ ಬಿಟ್ಟವನು ಸೇರುವುದು ಕರ್ನಾಟಕದ ಮಂಜಿನಡ್ಕಕ್ಕೆ. ಪುಸ್ತಕದ ಲೇಖಕನ ಮನೆಯನ್ನೂ ಹುಡುಕುತ್ತಾನೆ. ಲೇಖಕನ ಮಗಳು ನಂದಿತಾ (ಪೂನಂ ಬಾಜ್ವಾ) ಕಾಲಿಗೆ ಗೆಜ್ಜೆ ಕಟ್ಟಿದ್ದೇನೋ ಎಂಬಂತೆ ಹೊರಟು ನಿಂತಿರುತ್ತಾಳೆ.ಹೀಗಿರುವ ನಂದಿತಾಳಿಗೆ ತನ್ನ ಉದ್ದೇಶವನ್ನೂ ತಿಳಿಸುತ್ತಾನೆ ಅಭಿಜಿತ್. ಅದಕ್ಕೆ ಬೇಕಾದ ಸಹಕಾರ ನಂದಿತಾಳಿಂದ ಸಿಗುತ್ತದೆ. ವಾಸ್ತವದಲ್ಲಿ ಕಾದಂಬರಿಯಲ್ಲಿನ ರೇಣುಕಾಳನ್ನೇ (ಪೂನಂ ಬಾಜ್ವಾ) ನಂದಿತಾಳಲ್ಲಿ ಅಭಿಜಿತ್ ನೋಡುತ್ತಾನೆ. ನೋಡುತ್ತಾ ನೋಡುತ್ತಾ ತಾನು ಅರುಣ್ (ಮಮ್ಮುಟ್ಟಿ) ಆಗುತ್ತಾನೆ. ಆದರೆ ಅಲ್ಲಿ ನಡೆದಿರುವುದು ನಂದಿನಿಯ ಚಾಕಚಕ್ಯತೆ. ಅದೇನು ಅನ್ನೋದನ್ನು ಚಿತ್ರಮಂದಿರದಲ್ಲೇ ನೋಡಿ.