Select Your Language

Notifications

webdunia
webdunia
webdunia
webdunia

ಶಂಕರ್ ಐಪಿಎಸ್‌ನಲ್ಲಿ ವಿಜಯ್ ಫೈಟಿಂಗ್, ಸಿಕ್ಸ್ ಪ್ಯಾಕ್ ಮೋಡಿ!

ಶಂಕರ್ ಐಪಿಎಸ್‌ನಲ್ಲಿ ವಿಜಯ್ ಫೈಟಿಂಗ್, ಸಿಕ್ಸ್ ಪ್ಯಾಕ್ ಮೋಡಿ!
MOKSHA
ಚಿತ್ರ: ಶಂಕರ್ ಐಪಿಎಸ್
ನಿರ್ದೇಶನ: ಎಂ.ಎಸ್. ರಮೇಶ್
ನಿರ್ಮಾಪಕ: ಕೆ. ಮಂಜು
ತಾರಾಗಣ: ವಿಜಯ್, ರಾಗಿಣಿ, ಕ್ಯಾಥರಿನ್, ರಂಗಾಯಣ ರಘು

ಕಾಮ ಅನ್ನೊದು ಮಕ್ಕಳನ್ನು ಹುಟ್ಟು ಹಾಕೋ ಕಲೆಯಾಗಿರಬೇಕೆ ಹೊರತು ಸುಟ್ಟು ಹಾಕೋ ಬೆಂಕಿಯಾಗಿರಬಾರದು-ಹೀಗೆನ್ನುತ್ತಲೇ ನಾಯಕ ಕಾಮಾಂಧತೆಯನ್ನು ಸುಟ್ಟು ಹಾಕುತ್ತಾನೆ.

ಇದು ಶಂಕರ್ ಐಪಿಎಸ್ ಚಿತ್ರ. ಅನ್ಯಾಯಾದ ವಿರುದ್ಧ ಹೋರಾಡುವ ನಾಯಕ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತಾನೆ. ಜಾಸ್ತಿ ಮಾತನಾಡಿದರೆ ಪಿಸ್ತೂಲ್ ತೆಗೆಯುತ್ತಾನೆ. ಅಗತ್ಯ ಬಂದರೆ ಕಾನೂನು ಕೈಗೆತ್ತಿಕೊಳ್ಳುತ್ತಾನೆ. ಮಧ್ಯೆ ಒಂದಷ್ಟು ಡೈಲಾಗ್‌ಗಳ ಸುರಿಮಳೆಯನ್ನೇ ಸುರಿಸುತ್ತಾನೆ. ಮೈ ಕೈ ಕಸರತ್ತು ಮಾಡುತ್ತಾನೆ. ಒಟ್ಟಾರೆ ಶಂಕರ್ ಐಪಿಎಸ್ ಪಡ್ಡೆ ಹುಡುಗರ ನಿದ್ದೆಗೆಡಿಸಿರುವುದಂತೂ ಸತ್ಯ. ಡೈಲಾಗಿನಲ್ಲಿ ವಿಜಯ್ ಎತ್ತಿದ ಕೈ. ವಿಜಯ್ ಬಾಯಿಂದ ಉಂಡೆಯಂತೆ ಡೈಲಾಗ್ ಉಗುಳುತ್ತಿದ್ದರೆ, ಶಿಳ್ಳೆ ಹಾಕುವ ಪ್ರೇಕ್ಷಕನಿಗಂತೂ ಹಬ್ಬವೇ ಸರಿ. ವಿಜಯ್ ಅವರ ಸಿಕ್ಸ್ ಪ್ಯಾಕ್ ನೋಡೋಕೇ ಚೆಂದ.
webdunia
MOKSHA


ಎರಡನೇ ನಾಯಕಿ ಕ್ಯಾಥರೀನ್‌ಗೆ ಮಾಡೆಲ್ ಆಗುವ ಕನಸು. ಆದರೆ ಆಕೆ ಹಿರಿಯ ರಾಜಕಾರಣಿಯೊಬ್ಬನ ಮಗನ ಕೈಯಲ್ಲಿ ಅತ್ಯಾಚಾರಕ್ಕಿಡಾಗುವುದಲ್ಲದೆ, ಆತ ಆಕೆಗೆ ಆಸಿಡ್ ಎರಚುತ್ತಾನೆ. ಇದರ ತನಿಖೆ ನಡೆಸುವ ಪೊಲೀಸ್ ಅಧಿಕಾರಿ ವಿಜಯ್, ಎಲ್ಲರನ್ನು ಮಟ್ಟ ಹಾಕುತ್ತಾನೆ. ಕೊನೆಗೆ ನ್ಯಾಯಕ್ಕೆ ಜಯ ಸಿಗುತ್ತಾ ಅನ್ನುವುದೇ ಚಿತ್ರದ ಕ್ಲೈಮಾಕ್ಸ್.

ನಾಯಕಿಯಾಗಿ ರಾಗಿಣಿ ಅಭಿನಯಿಸಿದ್ದಾರೆ. ರಾಗಿಣಿ ಕುಣಿತ, ಗ್ಲ್ಯಾಮರ್ ಎಲ್ಲಾ ನೋಡೋಕೆ ಕಣ್ಣಿಗೆ ಹಬ್ಬ. ಬೀಚಿನಲ್ಲಿ ಚುಂಬಕ.. ಹಾಡು ಹಾಡುತ್ತಾ ವಿಜಯ್ ಜೊತೆ ಬಿಸಿ ಬಿಸಿಯಾಗಿ ಡ್ಯುಯೆಟ್ ಹಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಉಳಿದಂತೆ ಅವಿನಾಶ್ ಪಾತ್ರ ಮನಸ್ಸಿನಲ್ಲಿಯೇ ಅಚ್ಚಾಗಿ ಉಳಿಯುತ್ತದೆ. ರಂಗಾಯಣ ರಘು ಅವರ ಲಾಯರ್ ಪಾತ್ರ ಮೆಚ್ಚುವಂತದ್ದೇ. ಗುರುಕಿರಣ್ ಅವರ ಹಾಡು ಪರವಾಗಿಲ್ಲ. ಒಟ್ಟಾರೆ ವಿಜಯ್ ಸಿಕ್ಸ್ ಪ್ಯಾಕ್, ಡೈಲಾಗ್ ಮತ್ತು ಫೈಟಿಂಗ್ ನೋಡಲು ಚಿತ್ರಮಂದಿರಕ್ಕೆ ತೆರಳಬಹುದು.

Share this Story:

Follow Webdunia kannada