Select Your Language

Notifications

webdunia
webdunia
webdunia
webdunia

ರೊಮ್ಯಾನ್ಸ್, ಫೈಟ್‌ನಲ್ಲಿ ವೀರ ಮದಕರಿ ಸೈ

ವೀರಮದಕರಿ
ರವಿಪ್ರಕಾಶ್ ರೈ

MOKSHENDRA
ಹೆಸರಿನ ವಿಷಯದಲ್ಲಿ ವಿವಾದಗಳನ್ನು ಎದುರಿಸಿದರೂ ಕೊನೆಗೂ ಚಿತ್ರ ಬಿಡುಗಡೆಯಾಗಿದೆ. ಇದೊಂದು ಕಳ್ಳ ಪೊಲೀಸ್ ಕಥೆ. ಎರಡೂ ಪಾತ್ರದಲ್ಲಿ ಸುದೀಪ್ ನಟಿಸಿರುವುದರಿಂದ ಇಲ್ಲಿ ನಾವು ಹೆಚ್ಚು ವ್ಯತ್ಯಾಸ ಕಾಣುವ ಹಾಗಿಲ್ಲ. ಇದು ತೆಲುಗಿನ ವಿಕ್ರಮಾರ್ಕುಡು ಚಿತ್ರದ ರೀಮೇಕು. ಅಲ್ಲಿ ರವಿತೇಜ ನಟಿಸಿದ್ದರು. ಇಲ್ಲಿ ಆ ಪಾತ್ರವನ್ನು ಸುದೀಪ್ ಮಾಡಿದ್ದಾರೆ.

ಚಿತ್ರದಲ್ಲಿ ರೊಮ್ಯಾನ್ಸ್ ಇದೆ. ಮೈ ಜುಮ್ಮೆನಿಸುವ ಅದ್ದೂರಿ ಫೈಟ್‌ಗಳಿವೆ. ತೆಲುಗಿನ ದೃಶ್ಯಗಳನ್ನು ಯಥಾವತ್ತಾಗಿ ಇಲ್ಲಿ ಚಿತ್ರಿಸುವ ಪ್ರಯತ್ನವನ್ನು ಸುದೀಪ್ ಮಾಡಿದ್ದಾರೆ. ಪ್ರೇಕ್ಷಕರು ಬಯಸುವ ಹೆಚ್ಚಿನ ಅಂಶಗಳು ಚಿತ್ರದಲ್ಲಿವೆ. ಚಿತ್ರದಲ್ಲಿ ಫೈಟಿಂಗ್ ದೃಶ್ಯಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಇಲ್ಲಿ ಬಳಸಲಾಗಿರುವ ಕೆಲವು ಆಯುಧಗಳು ಹೊಸ ಪ್ರಯೋಗವೆಂದೇ ಹೇಳಬಹುದು. ಈ ಹಿಂದಿನ ಚಿತ್ರಗಳಲ್ಲಿ ಪ್ರೇಕ್ಷಕ ಅದನ್ನು ಕಂಡಿರಲಿಕ್ಕಿಲ್ಲ.

ಅಲ್ಲಲ್ಲಿ ಬರುವ ಸೊಂಟದ ದೃಶ್ಯಗಳು ಒಮ್ಮೊಮ್ಮೆ ಇಷ್ಟವಾಗುತ್ತವೆ. ಹಾಸ್ಯ ದೃಶ್ಯಗಳಲ್ಲಿ ಸುದೀಪ್ ಪ್ರಯತ್ನ ಅಷ್ಟೊಂದು ವರ್ಕ್ಓಟ್ ಆಗಿಲ್ಲ. ಸುದೀಪ್ ತೆಲುಗು ಚಿತ್ರದ ದೃಶ್ಯಗಳ ಮೇಲೆಯೇ ಹೆಚ್ಚು ಗಮನ ವಹಿಸಿರುವುದರಿಂದ ಅವರ ಭಾವನಾತ್ಮಕ ಅಭಿನಯ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಆದರೆ ಡೈಲಾಗ್ ಡೆಲಿವರಿಯಲ್ಲಿ ಸುದೀಪ್ ಸೂಪರ್.

ಟೆನ್ನಿಸ್ ಕೃಷ್ಣ ಅವರ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಇದರೊಂದಿಗೆ ಅವರು ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಾಯಕಿ ರಾಗಿಣಿ ಕೊಟ್ಟ ಪಾತ್ರವನ್ನು ನಿಭಾಯಿಸಿದ್ದಾರೆ. ಉಳಿದಂತೆ ಸಂಗೀತ, ವೃತ್ತಿಪರತೆ, ಕ್ಯಾಮೆರಾ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ. ಹಾಗಾಗಿ ವೀರಮದಕರಿಯನ್ನು ನೋಡಬಹುದು ಒಮ್ಮೆ.
webdunia
MOKSHENDRA

Share this Story:

Follow Webdunia kannada