ಪರಮಾತ್ಮ ವಿಮರ್ಶೆ; ಸಕಲ ಕಲಾ ವಲ್ಲಭರ ಸೂಪರ್ ಶೋ
ಚಿತ್ರ : ಪರಮಾತ್ಮತಾರಾಗಣ : ಪುನೀತ್ ರಾಜ್ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರೇ, ರಮ್ಯಾ ಬಾರ್ನೆ, ಅನಂತ್ನಾಗ್, ರಂಗಾಯಣ ರಘುನಿರ್ದೇಶನ : ಯೋಗರಾಜ್ ಭಟ್ಸಂಗೀತ : ಹರಿಕೃಷ್ಣ ವಿ.
ಕಥೆಯೇ ಇಲ್ಲದ ಸಿನಿಮಾವೊಂದನ್ನು ಭರ್ತಿ ಎರಡೂಕಾಲು ಗಂಟೆಗಳ ಕಾಲ ಪ್ರೇಕ್ಷಕರು ಕಣ್ಣೆವೆ ಮುಚ್ಚದೆ ನೋಡುವಂತೆ ಮಾಡುವುದು ಹೇಗೆ? ಈ ಪ್ರಶ್ನೆಗೆ ನಿರ್ದೇಶಕ ಯೋಗರಾಜ್ ಭಟ್ ಇನ್ನೊಮ್ಮೆ ಉತ್ತರಿಸಿದ್ದಾರೆ. ತಾನು ಆರಿಸುವ ವಿಷಯ ಗಂಭೀರವಾಗಿದ್ದರೂ, ಸಿನಿಮಾ ಮಾತ್ರ ಜಾಲಿ ಜಾಲಿ. ಇದು ತನ್ನಿಂದ ಮಾತ್ರ ಸಾಧ್ಯ ಎಂಬ ಸಂದೇಶವೂ ತಲುಪಬೇಕಾದವರಿಗೆ ತಲುಪುತ್ತದೆ. ಇದು ಅರ್ಥವಾಗದ ಪ್ರೇಕ್ಷಕರದ್ದು ಗೊಣಗಾಟ.ಈ ಹಿಂದೆ 'ಪಂಚರಂಗಿ'ಯಲ್ಲಿ ಬಿಡಿ ಬಿಡಿ ವಿಚಾರಗಳನ್ನು ಇಡಿಯನ್ನಾಗಿಸಿದ್ದ ಭಟ್ಟರು 'ಪರಮಾತ್ಮ'ದಲ್ಲಿ ಒರಿಜಿನಲ್ ವೇದಾಂತಿ. ಸಭ್ಯತೆಗೆ ಸಭ್ಯತೆ, ಸಂದೇಶಕ್ಕೆ ಸಂದೇಶ, ಮನರಂಜನೆಗೆ ಮನರಂಜನೆ -- ಹೀಗೆ ಎಲ್ಲಾ ವಿಭಾಗಗಳಿಗೂ ಸಿನಿಮಾವನ್ನು ಹರಿದು ಹಂಚಿರುವ ಅವರು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಮೇಜನ್ನೇ ಬದಲಿಸಿದ್ದಾರೆ. ಅವರದ್ದಿಲ್ಲಿ ವಿಭಿನ್ನ ಮತ್ತು ವಿಸ್ಮಯದ ಪಾತ್ರ.