Select Your Language

Notifications

webdunia
webdunia
webdunia
webdunia

ಪತ್ರಕರ್ತೆಯ ದಿಟ್ಟ ಸಾಹಸದ 'ಅನು'

ಪೂಜಾಗಾಂಧಿ
MOKSHENDRA
ಕನ್ನಡದಲ್ಲಿ ಭಾರೀ ಸಮಯದ ನಂತರ ಒಂದು ಉತ್ತಮ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ಮೂಡಿ ಬಂದಿದೆ. ಅದು 'ಅನು'. ಒಂದು ಕೊಲೆಯ ಜಾಡು ಹಿಡಿದು ಹೋಗುವ ಪತ್ರಕರ್ತೆಯೊಬ್ಬಳ ಕಥೆ. ಇದು ತೆಲುಗಿನ 'ಅನುಸೂಯ' ಚಿತ್ರದ ರೀಮೇಕಾಗಿರಬಹುದು. ಆದರೆ ಮೂಲಕಥೆಗೆ ಎಲ್ಲೂ ಧಕ್ಕೆ ಬರದಂತೆ ಅಚ್ಚುಕಟ್ಟಾಗಿ ನಿರೂಪಿಸುವ ಮೂಲಕ ಹೊಸ ತಂಡ ಗಾಂಧಿನಗರದಲ್ಲಿ ಭರವಸೆ ಮೂಡಿಸಿದೆ.

ನಗರದಲ್ಲಿ ಒಂದೊಂದೇ ಕೊಲೆಗಳು ನಡೆಯುತ್ತಿರುತ್ತದೆ. ಪ್ರತಿ ಹೆಣದ ಒಂದೊಂದು ಅಂಗಗಳು ಮಾಯವಾಗಿರುವುದಲ್ಲದೇ ಹಂತಕ ಅದರ ಪಕ್ಕದಲ್ಲಿ ಒಂದು ಗುಲಾಬಿ ಹೂವು ಇಟ್ಟು ಹೋಗಿರುತ್ತಾನೆ. ಆದರೆ ಈ ಕೊಲೆಗಳನ್ನು ಯಾರು ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ಒಂದು ದಿನ ತನ್ನ ಅಂಕಲ್‌ನನ್ನು ಕೊಲೆ ಮಾಡಿ ಹೋಗುವಾಗ ಪೂಜಾ ಗಾಂಧಿ ಹಂತಕನನ್ನು ನೋಡಿ ಬಿಡುತ್ತಾಳೆ. ಕೊಲೆಗಾರನ ಹೋಲಿಕೆ ಇರುವವನನ್ನು ಅರೆಸ್ಟ್ ಮಾಡಿಸುತ್ತಾಳೆ. ಆದರೆ ಆತ ಅಂಕವಿಕಲ. ಅವನು ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಬಿಟ್ಟು ಬಿಡುತ್ತಾರೆ.

ಆದರೆ ಕ್ರೈಂ ರಿಪೋರ್ಟರ್ ಆದ ಪೂಜಾಗೆ ಅವನ ಮೇಲಿನ ಅನುಮಾನ ಬಿಡುವುದಿಲ್ಲ. ಆತನ ಬೆನ್ನ ಹಿಂದೆ ಬೀಳುತ್ತಾಳೆ. ಆತ ಅಂಗವಿಕಲನಂತೆ ನಟಿಸಿ ಆ ಎಲ್ಲ ಕೊಲೆಗಳನ್ನು ಆತನೇ ಮಾಡಿರುತ್ತಾನೆ ಎಂಬ ಸತ್ಯವನ್ನು ಪೂಜಾ ಕಂಡು ಹಿಡಿಯುತ್ತಾಳೆ... ಹೀಗೆ ಅನು ಚಿತ್ರ ಪ್ರತಿ ಅಂಶದಲ್ಲೂ ಕುತೂಹಲ ಸೃಷ್ಟಿಸುತ್ತಲೇ ಹೋಗುತ್ತದೆ. ಚಿತ್ರ ಆರಂಭವಾಗುವುದೊಂದು ಗೊತ್ತಾಗುತ್ತದೆ. ಆದರೆ ಇಷ್ಟು ಬೇಗ ಮುಗಿಯಿತಾ ಎಂಬ ಉದ್ಗಾರ ಪ್ರೇಕ್ಷಕರಿಂದ ಬಂದರೆ ಅದು ಚಿತ್ರತಂಡದ ಪರಿಶ್ರಮಕ್ಕೆ ಸಿಕ್ಕ ಫಲ.

ಮೊದಲ ಬಾರಿಗೆ ಸೈಕೋ ಕಿಲ್ಲರ್ ಆಗಿ ಅಭಿನಯಿಸಿದ ನಿರ್ಮಾಪಕ ಬಾಲು ಯಾವ ನಟನಿಗೂ ಕಮ್ಮಿ ಇಲ್ಲದಂತೆ ನಟಿಸಿದ್ದಾರೆ. ಅವರ ಹಾವಭಾವ, ಕಣ್ಣಿನಲ್ಲೇ ಕೊಲ್ಲುವ ಭಂಗಿ ಎಲ್ಲವೂ ಅದ್ಬುತವಾಗಿ ಮೂಡಿಬಂದಿದೆ. ಪೂಜಾಗಾಂಧಿ ಈವರೆಗೆ ನಟಿಸಿದ ಎಲ್ಲ ಚಿತ್ರಕ್ಕಿಂತ ಈ ಚಿತ್ರದ ಅವರ ಅಭಿನಯವನ್ನು ಮೆಚ್ಚಲೇಬೇಕು. ಗ್ಲ್ಯಾಮರಸ್ ಪಾತ್ರದಲ್ಲೂ ನಟಿಸಬಲ್ಲೇ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಮೊದಲ ಬಾರಿಗೆ ಮೇಕಪ್ ಇಲ್ಲದ ಅವರ ಮುಖವನ್ನು ಕಾಣಬಹುದು. ಕ್ರೈಂ ವರದಿಗಾರ್ತಿಯಾಗಿ ಅವರ ಅಭಿನಯ, ಮುಖದ ಭಾವನೆಗಳು ಎಲ್ಲವೂ ಅದ್ಬುತವಾಗಿ ಮೂಡಿಬಂದಿದೆ.

ರಶ್ಮಿ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಗಕಿರಣ್ ಎಲ್ಲ ಚಿತ್ರದಂತೆ ಇಲ್ಲೂ ನಟಿಸಿದ್ದಾರೆ. ಉಳಿದಂತೆ ರಮೇಶ್ ಭಟ್, ಅಚ್ಯುತ್, ಸುಂದರ್ ರಾಜ್ ಚೆನ್ನಾಗಿ ಅಭಿನಯಿಸಿದ್ದಾರೆ. ನೆರಳು ಬೆಳಕಿನಾಟದಲ್ಲಿ ನಿರಂಜನ ಬಾಬು ಅವರ ಕ್ಯಾಮರಾ ಕೈ ಚಳಕ ಮೆಚ್ಚಬೇಕು. ಒಂದು ಸಸ್ಪೆನ್ಸ್ ಚಿತ್ರಕ್ಕೆ ಯಾವ ರೀತಿಯ ಸಂಗೀತ ಬೇಕೋ ಅಂತಹ ಸಂಗೀತವನ್ನು ನೀಡಿದ್ದಾರೆ. ಒಟ್ಟಾಗಿ ಅನು ಚಿತ್ರ ಮೂಡಿ ಬಂದಿದೆ. ಕುಟುಂಬ ಸಮೇತರಾಗಿ ನೋಡಿ ಬನ್ನಿ.

ಚಿತ್ರ: ಅನು
ತಾರಾಗಣ: ಪೂಜಾಗಾಂಧಿ, ರಶ್ಮಿ, ನಾಗಕಿರಣ್, ರಮೇಶ್ ಭಟ್
ನಿರ್ದೇಶನ: ಗಣಪತಿ

Share this Story:

Follow Webdunia kannada