Select Your Language

Notifications

webdunia
webdunia
webdunia
webdunia

ನಾನಲ್ಲ ಚಿತ್ರವಿಮರ್ಶೆ; ಹಳೆಯ ದಿನೇಶ್ ಬಾಬು ವಾಪಸ್

ಭಿನ್ನ ಕಥೆ, ಭಿನ್ನ ತಂತ್ರ, ವಿಭಿನ್ನ ಚಿತ್ರ..

ನಾನಲ್ಲ ಚಿತ್ರವಿಮರ್ಶೆ; ಹಳೆಯ ದಿನೇಶ್ ಬಾಬು ವಾಪಸ್
ಚಿತ್ರ: ನಾನಲ್ಲ
ತಾರಾಗಣ: ತರುಣ್ ಚಂದ್ರ, ಶುಭಾ ಪೂಂಜಾ, ಅನಂತ್‌ನಾಗ್, ಖುಷ್ಬೂ
ನಿರ್ದೇಶಕ: ದಿನೇಶ್ ಬಾಬು
ಸಂಗೀತ: ಗಿರಿಧರ್ ದಿವಾನ್

PR
ದಿನೇಶ್ ಬಾಬು ತಲೆ ಇನ್ನೂ ಖಾಲಿಯಾಗಿಲ್ಲವೇ ಅಂತ ಚಿತ್ರ ನೋಡಿದ ಮೇಲೆ ಪ್ರಶ್ನಿಸಬಹುದು. ಅಂತಹಾ ಅದ್ಭುತ ಥ್ರಿಲ್ಲರ್ ಚಿತ್ರವೊಂದನ್ನು ಕನ್ನಡ ಪ್ರೇಕ್ಷಕರಿಗೆ ಬಾಬು ಕೊಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಥ್ರಿಲ್ಲರ್ ಸಿನಿಮಾ ಕನ್ನಡದಲ್ಲಿ ಬಂದಿಲ್ಲವೆಂದರೂ ಅಚ್ಚರಿಯಲ್ಲ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹೀಗೆ ಸಿನಿಮಾದಲ್ಲಿ ಅಚ್ಚರಿಯನ್ನಿಟ್ಟಿರುವುದು ದಿನೇಶ್ ಬಾಬು ಮಾತ್ರವಲ್ಲ, ನಾಯಕ ತರುಣ್ ಚಂದ್ರ ಕೂಡ. ಇದುವರೆಗೆ ಚಾಕಲೇಟ್ ಬಾಯ್ ಪಾತ್ರದಲ್ಲಿ ಮಿಂಚಿದ್ದವರು, ಇಲ್ಲಿ ಉಲ್ಟಾ ಪಾತ್ರ ಮಾಡಿದ್ದಾರೆ. ಇತರೆ ಹಿರಿಯರನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರಿಗೆ ಕಷ್ಟವಲ್ಲವಾದರೂ, ತರುಣ್‌ರನ್ನು ಪಾತ್ರಕ್ಕೆ ಒಗ್ಗಿಸುವುದು ಸವಾಲಾಗಿದ್ದಿರಬಹುದು. ಆದರೂ ತರುಣ್ ಬಳಲಿದ್ದಾರೆ ಅಂತ ಎಲ್ಲೂ ಗೊತ್ತಾಗುವುದೇ ಇಲ್ಲ.

ಪ್ರೊಫೆಸರ್ ಒಬ್ಬರ ಕೊಲೆ ಪ್ರಕರಣದ ಹಿಂದೆ ಇಡೀ ಸಿನಿಮಾ ಸುತ್ತುತ್ತದೆ. ಇದರ ಹಿಂದೆ ಸಿದ್ಧಾರ್ಥನ (ತರುಣ್) ಪ್ರಿಯತಮೆ ಭವ್ಯಾ (ಶುಭಾ ಪೂಂಜಾ) ಆತ್ಮಹತ್ಯೆಯ ಛಾಯೆಯಿದೆ. ಪ್ರೊಫೆಸರ್ ವಿಕೃತ ಕಾಮಿ. ಕಾಫಿಯಲ್ಲಿ ಮತ್ತು ಬರಿಸುವ ಮದ್ದು ಕೊಟ್ಟು ಅಶ್ಲೀಲ ಭಂಗಿಗಳಲ್ಲಿ ಸಿಡಿ ಮಾಡುವವನು. ಭವ್ಯಾ ಸಾವಿನಲ್ಲೂ ಅದೇ ಇತ್ತು. ಸಿಡಿಯನ್ನು ಸಿದ್ಧಾರ್ಥ ಕೂಡ ನೋಡಿದ್ದ.

ಸೇಡಿನ ಹಿಂದೆ ಬಿದ್ದ ಸಿದ್ದಾರ್ಥ, ಕ್ಷಮೆಯನ್ನೂ ಮರೆತು ಪ್ರೊಫೆಸರ್‌ನನ್ನು (ಸಿಹಿಕಹಿ ಚಂದ್ರು) ಹತ್ಯೆಗೈಯುತ್ತಾನೆ. ನ್ಯಾಯಾಲಯದಲ್ಲಿ ಸಿದ್ಧಾರ್ಥನ ಪರ ಶರತ್ ಚಂದ್ರ (ಅನಂತ್‌ನಾಗ್) ಹಾಗೂ ಸರಕಾರಿ ವಕೀಲೆಯಾಗಿ ಗೌರಿ (ಖುಷ್ಬೂ) ವಾದಿಸುತ್ತಾರೆ. ವಕೀಲರಿಬ್ಬರೂ ಗಂಡ ಹೆಂಡತಿ. ಆದರೆ ಕೇಸಿನ ವಿಚಾರದಲ್ಲಿ ಬದ್ಧ ಎದುರಾಳಿಗಳು. ಇಬ್ಬರೂ ತಮ್ಮತಮ್ಮ ವಾದಗಳಿಗೆ ಅಂಟಿಕೊಂಡವರು.

ಇಂತಹಾ ಸಿದ್ದಾರ್ಥ ಕಾನೂನಿನ ಕುಣಿಕೆಯಿಂದ ಬಿಡಿಸಿಕೊಳ್ಳಲು ಹೂಡುವ ತಂತ್ರವೇ ಚಿತ್ರದ ಪ್ರಮುಖ ಅಂಶ. ಅದರಲ್ಲಿ ಆತ ಎಷ್ಟು ಯಶಸ್ವಿಯಾಗುತ್ತಾನೆ? ವಕೀಲ ಶರತ್ ಚಂದ್ರ ಹೇಗೆ ಪ್ರಕರಣವನ್ನು ನಿಭಾಯಿಸುತ್ತಾನೆ? ಸಿದ್ಧಾರ್ಥನಿಗೆ ಶಿಕ್ಷೆಯಾಗುತ್ತಾ? ಇದು ಚಿತ್ರಮಂದಿರದಲ್ಲೇ ನೋಡಬೇಕಾದ ಉಳಿದ ಇಂಟರೆಸ್ಟಿಂಗ್ ಭಾಗ.

'ನಾನಲ್ಲ'ದ ಮೂಲಕ ಹಳೆಯ ದಿನೇಶ್ ಬಾಬು ಮರಳಿದ್ದಾರೆ. ಹಳೆಯ ಕಥೆಯಾದರೂ, ಬಿಗಿಯಾದ ಚಿತ್ರಕಥೆ, ನಿರೂಪನೆ ಪ್ರತಿಯೊಬ್ಬರನ್ನೂ ಸೀಟಿನ ತುದಿಯಲ್ಲೇ ಕೂರುವಂತೆ ಮಾಡುತ್ತದೆ.

ಅನಂತ್‌ನಾಗ್, ಖುಷ್ಬೂ ಲಾಯರ್ ದಂಪತಿಯಾಗಿ ಅತ್ಯುತ್ತಮರು. ಗಿರಿಧರ್ ದಿವಾನ್ ಸಂಗೀತದ ಎರಡು ಹಾಡುಗಳು ಕಿವಿಗೆ ಇಂಪಾಗುತ್ತವೆ. ಸುರೇಶ್ ಬೈರಸಂದ್ರ ಕ್ಯಾಮರಾ ಕೂಡ ಮೋಸ ಮಾಡಿಲ್ಲ.

ನೀವು ಯಾವುದೇ ದೊಡ್ಡ ಸ್ಟಾರುಗಳ ಅಭಿಮಾನಿಯಲ್ಲದೇ ಇದ್ದರೆ, ನಿಜಕ್ಕೂ ಅತ್ಯುತ್ತಮ ಚಿತ್ರವೊಂದನ್ನು ನೋಡಬೇಕೆಂದಿದ್ದರೆ, ಸಾಧ್ಯವಾದಷ್ಟು ಬೇಗ ಚಿತ್ರಮಂದಿರಕ್ಕೆ ಹೋಗಿ. ಯಾಕೆಂದರೆ ಪ್ರಚಾರದ ಕೊರತೆಯಿಂದ ಬಳಲಿರುವ 'ನಾನಲ್ಲ' ಒಂದೇ ವಾರದಲ್ಲಿ ಕಾಲ್ಕಿತ್ತರೂ ಅಚ್ಚರಿಯಿಲ್ಲ!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada