Select Your Language

Notifications

webdunia
webdunia
webdunia
webdunia

ಒಲವೇ ಮಂದಾರ; ದಣಿವರಿಯದ ಪ್ರೀತಿಯ ಹುಡುಕಾಟ

ಒಲವೇ ಮಂದಾರ; ದಣಿವರಿಯದ ಪ್ರೀತಿಯ ಹುಡುಕಾಟ
PR
ಚಿತ್ರ: ಒಲವೇ ಮಂದಾರ
ನಿರ್ದೇಶಕ: ಜಯತೀರ್ಥ
ಸಂಗೀತ: ದೇವಾ
ನಾಯಕ: ಶ್ರೀಕಾಂತ್, ಆಕಾಂಕ್ಷಾ, ರಂಗಾಯಣ ರಘು

ಇದೊಂದು ಬಗೆಯ ಪ್ರೀತಿಯ ಹುಡುಕಾಟ. ಇಲ್ಲಿ ಹೀರೋ ಪ್ರೀತಿಗಾಗಿ ನಡೆದುಕೊಂಡೇ ದೇಶ ಸುತ್ತುತ್ತಾನೆ. ಪ್ರೀತಿಯ ಹುಡುಕಾಟದಲ್ಲಿ ಪ್ರೇಕ್ಷಕನಿಗೆ ಬಹುತೇಕ ಇಡೀ ಭಾರತವನ್ನು ನಾಯಕ ತೋರಿಸುತ್ತಾನೆ. ಹೊಸ ನಿರ್ದೇಶಕ ಜಯತೀರ್ಥ ತಮ್ಮ ಮೊದಲ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಭಾರತ ಪ್ರವಾಸದ ಫ್ರೀ ಟಿಕೆಟ್ ಕೊಟ್ಟಿದ್ದಾರೆ. ಆ ಮೂಲಕ ಲವ್ ಸ್ಟೋರಿಗೆ ಒಂದಷ್ಟು ಅಡ್ವೆಂಚರ್ಸ್ ಆಯಾಮ ನೀಡಿದ್ದಾರೆ.

ಹಿಂದೆ ಏಳು ಸಾಗರ ದಾಟಿ ರಾಜಕುಮಾರಿಯನ್ನು ಹುಡುಕಬೇಕಿತ್ತು. ಈ ಸಿನಿಮಾದಲ್ಲಿ ಪ್ರೀತಿಗೆ (ಹೀರೋಯಿನ್ ಹೆಸರೂ ಕೂಡ ಇದೇ) ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅವನು ಏಳು ರಾಜ್ಯ ದಾಟುತ್ತಾನೆ.

ಶ್ರೀಕಿ (ಶ್ರೀಕಾಂತ್) ಡ್ಯಾನ್ಸ್ ಕಾಂಪೀಟೀಷನ್ ಒಂದರಲ್ಲಿ ಪ್ರೀತಿಯನ್ನು (ಆಕಾಂಕ್ಷ) ಭೇಟಿ ಮಾಡುತ್ತಾನೆ. ಪ್ರೀತಿ ಅಸ್ಸಾಮಿನ ಹಳ್ಳಿಯೊಂದರ ಹುಡುಗಿ. ಬೆಂಗಳೂರಿನ ಸಿರಿವಂತ ಶ್ರೀಕಿ, ಪ್ರೀತಿ ಜತೆ ಫ್ಲರ್ಟ್ ಮಾಡುತ್ತಾನೆ. ಜಸ್ಟ್ ಫ್ಲರ್ಟ್ ಮಾಡುವುದಷ್ಟೇ ಅವನ ಉದ್ದೇಶ. ಆದರೆ ಹಳ್ಳಿ ಹುಡುಗಿ ಪ್ರೀತಿ ಇದನ್ನೇ ಪ್ರೀತಿ ಎಂದು ನಂಬಿ ಬಿಡುತ್ತಾಳೆ.

ಆದರೆ ಕೆಲ ದಿನಗಳ ನಂತರ ಶ್ರೀಕಿಗೆ ತನ್ನ ತಪ್ಪಿನ ಅರಿವಾಗುತ್ತದೆ. ನಡೆದುಕೊಂಡೇ ಅಸ್ಸಾಂ ಕಡೆ ಹೊರಡುತ್ತಾನೆ. ಬೆಟ್ಟ ಏರುತ್ತಾನೆ, ಕಂದಕ ಇಳಿಯುತ್ತಾನೆ, ಆ ಹಾದಿಗುಂಟ ಆತ ಎದುರಿಸುವ ಸಮಸ್ಯೆಗಳು, ಕಲಿಯುವ ಪಾಠಗಳೇ ಆತನ ಬದುಕಿನಲ್ಲಿ ಹೊಸ ತಿರುವು ಕೊಡುತ್ತದೆ. ದಾರಿಯುದ್ದಕ್ಕೂ ಐದಾರು ಭಾಷೆಗಳ ಪಾತ್ರಗಳು ಸಿಗುತ್ತವೆ. ಇದು ಜಸ್ಟ್ ಕನ್ನಡ ಸಿನಿಮಾ ಎಂದೆನಿಸಿಕೊಳ್ಳದೆ ಇಂಡಿಯನ್ ಲ್ಯಾಂಗ್ವೇಜ್ ಸಿನಿಮಾ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡು ಬಿಡುತ್ತದೆ.

ಕವಿ ಜಿಪಿ ರಾಜರತ್ನಂರ ರತ್ನ ಮತ್ತು ನಂಜಿ ಪಾತ್ರಗಳೂ ಸಿನಿಮಾದಲ್ಲಿವೆ. ಅದನ್ನು ರಂಗಾಯಣ ರಘು ಮತ್ತು ವೀಣಾ ಸುಂದರ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಇದೇ ರತ್ನ ತನ್ನ ಅಂಗವಿಕಲ ಪತ್ನಿಯನ್ನು ಕಾಶಿಗೆ ತಳ್ಳುಗಾಡಿಯಲ್ಲಿ ಕರೆದುಕೊಂಡು ಹೋಗುವಾಗ ಶ್ರೀಕಿ ನೋಡುತ್ತಾನೆ. ಆಗಲೇ ಶ್ರೀಕಿಗೆ ಪ್ರೀತಿಯ ಆಳದ ಅರಿವಾಗುತ್ತದೆ.

ಸಿನಿಮಾಟೋಗ್ರಾಫರ್ ದೇವ ಸಿನಿಮಾದ ಪಯಣವನ್ನು ಚೆನ್ನಾಗಿ ಹಿಡಿದಿಟ್ಟಿದ್ದಾರೆ. ನಿರ್ಮಾಪಕರ ಪುತ್ರ ಹೀರೋ ಶ್ರೀಕಾಂತ್ ಮನ ಗೆದ್ದಿದ್ದಾರೆ. ಜಯತೀರ್ಥ ಚೊಚ್ಚಲ ಯತ್ನ ಯಶ ಕೊಟ್ಟಿದೆ.

ಬಾಕ್ಸ್ ಆಫೀಸಿನಲ್ಲಿ ಇದು ಯಾವ ರೀತಿಯ ಮೋಡಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು.

Share this Story:

Follow Webdunia kannada