ಹೈದರಾಬಾದ್: ತೆಲುಗು ಹಾಗೂ ತಮಿಳು ನಟಿ ಡಿಂಪಲ್ ಹಯಾತಿ ಹಾಗೂ ಆಕೆಯ ಪತಿ ವಿರುದ್ಧ ಮನೆ ಕೆಲಸದಾಕೆ ನೀಡಿದ ದೂರಿನ ಮೇರೆಗೆ ಫಿಲಂನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರ ಪ್ರಕಾರ ಒಡಿಶಾದ ಮನೆಕೆಲಸದಾಕೆ ನೀಡಿದ ದೂರಿನಲ್ಲಿ, ನಟಿ ಹಾಗೂ ಆಕೆಯ ಪತಿ ಅವಳನ್ನು ಕೆಟ್ಟದಾಗಿ ನಡೆಸಿಕೊಂಡರು ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಂಪಲ್ ಹಯಾತಿ ಮತ್ತು ಆಕೆಯ ಪತಿ ತನ್ನನ್ನು ವಿವಸ್ತ್ರಗೊಳಿಸಲು ಮತ್ತು ಥಳಿಸಲು ಪ್ರಯತ್ನಿಸಿದರು ಮತ್ತು ತನಗೆ ಆಘಾತವನ್ನುಂಟು ಮಾಡಿದರು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ದೂರು ಆಧರಿಸಿ ಫಿಲಂನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.