Select Your Language

Notifications

webdunia
webdunia
webdunia
webdunia

ಪುಷ್ಪಕ ವಿಮಾನ ಏರಲು ಕೊನೆಗೂ ಡೇಟ್ ಫಿಕ್ಸ್ ಆಯ್ತು

ಪುಷ್ಪಕ ವಿಮಾನ ಏರಲು ಕೊನೆಗೂ ಡೇಟ್ ಫಿಕ್ಸ್ ಆಯ್ತು
Bangalore , ಗುರುವಾರ, 1 ಡಿಸೆಂಬರ್ 2016 (09:08 IST)
ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿದೆ. ಆದರೆ ಅದು ಯಾವಾಗ ರಿಲೀಸ್ ಆಗುತ್ತದೆ ಎಂದು ಪಕ್ಕಾ ಆಗಿರಲಿಲ್ಲ. ಈಗ ಡೇಟ್ ಅನೌನ್ಸ್ ಆಗಿದ್ದು, ಜನವರಿ 6 ಕ್ಕೆ ಚಿತ್ರ ರಿಲೀಸ್ ಆಗಲಿದೆ.

ಇದು ರಮೇಶ್ ಅರವಿಂದ್ ಅಭಿನಯದ 100 ನೇ ಚಿತ್ರ ಎನ್ನುವುದು ವಿಶೇಷ. ಈಗಾಗಲೇ ರಮೇಶ್ ಲಂಡನ್ ಸೇರಿದಂತೆ ಹಲವು ದೇಶಗಳಿಗೆ ಯಾತ್ರೆ ಕೈಗೊಂಡಿದ್ದು, ಅಲ್ಲಿನ ಜನರ ಜತೆ ತಮ್ಮ 100 ಚಿತ್ರಗಳ ಕುರಿತು ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಮೂಲಕ ವಿದೇಶದಲ್ಲೂ ಪುಷ್ಪಕ ವಿಮಾನದ ಬಗ್ಗೆ ಕುತೂಹಲ ಸೃಷ್ಟಿಸಿದ್ದಾರೆ. ಇದು ಬುದ್ಧಿಮಾಂದ್ಯ ತಂದೆ ಮತ್ತು ಮಗಳ ಕುರಿತಾದ ಹೃದಯಕ್ಕೆ ನಾಟುವಂತಹ ಕಥಾ ಹಂದರವಿರುವ ಸಿನಿಮಾ. ರಮೇಶ್ ಜತೆ ರಚಿತಾ ರಾಂ, ಬಾಲ ನಟಿ ಯುವಿನಾ, ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಕೂಡಾ ನಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಸಿಎಂ ಆಗುವ ಆ ನಟಿ ಯಾರು?