Select Your Language

Notifications

webdunia
webdunia
webdunia
webdunia

ಈ ವಾರ ಒಂದೇ ಸಿನಿಮಾ ಬಿಡುಗಡೆ

ಈ ವಾರ ಒಂದೇ ಸಿನಿಮಾ ಬಿಡುಗಡೆ
Bangalore , ಶುಕ್ರವಾರ, 4 ನವೆಂಬರ್ 2016 (10:09 IST)
ಬೆಂಗಳೂರು: ಕಳೆದ ವಾರ ಎರಡು ಬಿಗ್ ಸಿನಿಮಾ ರಿಲೀಸ್ ಆಗಿತ್ತು. ಆದರೆ ಈ ವಾರ ಕನ್ನಡ ಚಿತ್ರಗಳ ವೀಕ್ಷಕರಿಗೆ ಕೊಂಚ ಬಿಡುವು. ಅದೂ ಹೊಸಬರ ಚಿತ್ರ.

“ಕಹಿ” ಎನ್ನುವ ಚಿತ್ರವೊಂದು ಈ ವಾರ ಬಿಡುಗಡೆಯಾಗುತ್ತಿದೆ. ಸುಮಾರು 30 ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಸೂರಜ್ ಗೌಡ, ಕ್ರಿಷಿ ತಪಂಡ, ಹರಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ.

ಕೇವಲ 60 ಲಕ್ಷ ಬಜೆಟ್ ನ ಸಿನಿಮಾವಿದು. ಹೊಸಬರ ಚಿತ್ರ ಎಂದು ಅಸಡ್ಡೆ ಮಾಡುವಂತಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಕತೆ, ಹೊಸತನದ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಹೀರೋ ಮುಖ ನೋಡದೆ ಮೆಚ್ಚಿಕೊಂಡಿದ್ದೂ ಇದೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಎರಡು ವಾರ ಹಿಂದೆ ಬಿಡುಗಡೆಯಾದ ರಾಮಾ ರಾಮಾ ರೇ. ಚಿತ್ರ ರಂಗದ ಗಣ್ಯರೆಲ್ಲಾ ಆ ಚಿತ್ರವನ್ನು ಒಪ್ಪಿಕೊಂಡು ಮೆಚ್ಚಿಕೊಂಡು ಒಳ್ಳೆಯ ಚಿತ್ರ ಎಂದು ಸರ್ಟಿಫಿಕೇಟ್ ಸಿಕ್ಕಿದೆ.

ಹಾಗಾಗಿ ಈ ಕಹಿ ಎನ್ನುವ ಚಿತ್ರವನ್ನೂ ಪ್ರೇಕ್ಷಕ ಪ್ರಭುಗಳು ಸಿಹಿ ಮಾಡುತ್ತಾರೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೈನಿಕರ ಸ್ಮರಿಸಿದ ಫೋರ್ಸ್ 2 ಚಿತ್ರತಂಡ