Select Your Language

Notifications

webdunia
webdunia
webdunia
webdunia

ಜಾನ್ ಜಾನಿ ಜನಾರ್ಧನ್ ಈ ವಾರ ತೆರೆಗೆ

ಜಾನ್ ಜಾನಿ ಜನಾರ್ಧನ್ ಈ ವಾರ ತೆರೆಗೆ
Bangalore , ಶನಿವಾರ, 5 ನವೆಂಬರ್ 2016 (10:33 IST)
ಬೆಂಗಳೂರು: ಈ ವಾರ ಸ್ಯಾಂಡಲ್ ವುಡ್ ನಲ್ಲಿ ಒಂದು ಮಾಸ್ ಸಿನಿಮಾ ಬಿಡುಗಡೆಯಾಗುತ್ತಿದೆ. ಅದುವೇ ಜಾನ್ ಜಾನಿ ಜನಾರ್ಧನ್.

ಮೂವರು ಸ್ನೇಹಿತರ ಕತೆಯಿರುವ ಸಿನಿಮಾ. ಫ್ಯಾಮಿಲಿ ಫೀಲ್ ಕೊಡಲು ಅಜೇಯ್ ರಾವ್ ಇದ್ದಾರೆ.  ಆಂಗ್ರಿ ಯಂಗ್ ಮ್ಯಾನ್ ಆಗಿ ಡಾರ್ಲಿಂಗ್ ಕೃಷ್ಣ ಇದ್ದಾರೆ. ನಗಿಸಲು ಲೂಸ್ ಮಾದ ಯೋಗಿ ಇದ್ದಾರೆ. ಒಟ್ಟಾರೆ ಇದು ಯುವ ಜನರಿಗೆ ಇಷ್ಟವಾಗುವಂತಹ ಸಿನಿಮಾ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಇಲ್ಲಿ ಕಾಮಿಡಿ ಇದೆ, ಸೆಂಟಿಮೆಂಟ್ ಇದೆ, ಗ್ಲಾಮರ್ ಇದೆ. ಒಟ್ಟಾರೆ ಫುಲ್ ಎಂಟರ್ ಟೈನ್ ಮೆಂಟ್ ಪ್ಯಾಕೇಜ್ ಎನ್ನುತ್ತಿದೆ ಚಿತ್ರತಂಡ.  ಲೇಡಿ ಟೈಗರ್ ಮಾಲಾಶ್ರೀ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮುತ್ತಪ್ಪ ರೈ ಲಾಂಛನದಲ್ಲಿ ಮೂಡಿಬರುತ್ತಿರುವ ಸಿನಿಮಾಗೆ ಗುರುದೇಶಪಾಂಡೆ ನಿರ್ದೇಶನವಿದೆ. ಸಿನಿಮಾದ ಕತೆಯೂ ಅವರದ್ದೇ. ಈಗಾಗಲೇ ಭರ್ಜರಿ ಪ್ರಚಾರಕ್ಕೆ ಇಳಿದಿರುವ ಚಿತ್ರ ತಂಡ ಉತ್ತರ ಕರ್ನಾಟಕ ಪ್ರವಾಸ ಮಾಡಿ ಬಂದಿದೆ. ಕೆಲವು ಕಾಲೇಜುಗಳಿಗೆ ಹೋಗಿ ಯುವ ಜನರನ್ನು ಸೆಳೆಯುವ ಪ್ರಯತ್ನವನ್ನೂ ಮಾಡಿದೆ. ಜನರಿಗೆ ಎಷ್ಟು ಇಷ್ಟವಾಗುತ್ತದೆ ಎನ್ನುವುದನ್ನು ನೋಡಲು ಶುಕ್ರವಾರದವರೆಗೆ ಕಾಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸಬರ ಚಿತ್ರವೆಂದು ಮುಖ ಕಹಿ ಮಾಡಬೇಡಿ