ಗಂಡ ಹೆಂಡತಿ ಚಿತ್ರದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಂಜನಾಗೆ ಏಕೋ ಕನ್ನಡದಲ್ಲಿ ಮತ್ತೆ ಅವಕಾಶಗಳು ಸಿಗಲಿಲ್ಲ. ಕ್ರಮೇಣ ಈ ಬೆಡಗಿ ಪರಭಾಷಾ ಚಿತ್ರಗಳಲ್ಲಿ ಬಿಜಿಯಾಗಿ ಬಿಟ್ಟರು. ತೆಲುಗು ಚಿತ್ರರಂಗದಲ್ಲಿ ಈಕೆಗೆ ಕೆಲವು ಅವಕಾಶಗಳು ಸಿಕ್ಕವು. ಆದರೆ ಕನ್ನಡ ಚಿತ್ರರಂಗದಿಂದ ಈಕೆಗೆ ದೂರವಾಗಲು ಇಷ್ಟವಿಲ್ಲವಂತೆ.
ಸದ್ಯ ಈಕೆ ಕನ್ನಡದಲ್ಲಿ ನಟಿಸಿರುವ ಈ ಸಂಜೆ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ. ಈ ಚಿತ್ರದಲ್ಲಿ ಈಕೆಗೆ ಉತ್ತಮ ಪಾತ್ರವಿದೆಯಂತೆ. ಗಂಡ ಹೆಂಡತಿ ಚಿತ್ರದಲ್ಲಿ ಮಾಡಿದ ತಪ್ಪನ್ನು ಈ ಚಿತ್ರದಲ್ಲಿ ಮತ್ತೆ ಮಾಡಿಲ್ಲವಂತೆ. ಆ ಚಿತ್ರದಲ್ಲಿ ನಟಿಸಿರುವುದು ಒಂದು ಕೆಟ್ಟ ಕನಸು ಎನ್ನುತ್ತಾರೆ ಸಂಜನಾ.
ಗಂಡ ಹೆಂಡತಿ ಚಿತ್ರದ ನಂತರ ಬಹುತೇಕ ಸಂಜನಾ ಕನ್ನಡ ಪ್ರೇಕ್ಷಕರ ಸ್ಮ್ಕತಿಪಟಲದಿಂದ ದೂರವಾಗಿದ್ದರು. ಮತ್ತೆ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗುವ ಬಯಕೆಯಿಂದ ವಾಹಿನಿಯೊಂದರ ಕುಣಿಯೋಣ ಬಾರಾ ನೃತ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಕನ್ನಡದಲ್ಲಿ ಉತ್ತಮ ಉತ್ತಮ ಅವಕಾಶಗಳು ಸಿಕ್ಕರೆ ಒಪ್ಪಿಕೊಳ್ಳುತ್ತೇನೆ ಎನ್ನುವ ಸಂಜನಾ ಇನ್ನೂ ಮುಂದೆ ಹೆಚ್ಚು ಎಕ್ಸ್‌ಪೋಸ್ ಮಾಡುವುದಿಲ್ಲ ಎನ್ನುತ್ತಾರೆ.