ಬಾಲನಟಿ ಮೋನಿಕಾ ಈಗ ನಾಯಕಿ. ಅವಸರ ಪೊಲೀಸ್ 100 ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದರು. ಈಗ ದೇವರು ಕೊಟ್ಟ ತಂಗಿ ಚಿತ್ರದಲ್ಲಿ ಶಿವಣ್ಣನ ತಂಗಿಯಾಗಿ ಅಭಿನಯಿಸುತ್ತಿದ್ದಾರೆ.
ಮೋನಿಕಾ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ತಮಿಳು, ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರು ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ.
ಗ್ಲಾಮರಸ್ ಪಾತ್ರ ಈಕೆಗೆ ಇಷ್ಟವಿಲ್ಲವಂತೆ. ಹಳ್ಳಿ ಹುಡುಗಿ ಪಾತ್ರ ಓಕೆ. ಎಕ್ಸ್ಪೋಸಿಂಗ್ ಪಾತ್ರದಲ್ಲಿ ನಟಿಸೋದಿಲ್ಲ ಎನ್ನುತ್ತಾರೆ ಮೋನಿಕಾ. ಇವರ ಅಭಿನಯದ ಎನ್ ಅಸೈ ಮಚ್ಚಾನ್ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಕೂಡ ದೊರೆತಿದೆ. ಬಾಲನಟಿಯಾಗಿ ಪ್ರೇಕ್ಷಕರ ಮನ ಗೆದ್ದ ಮೋನಿಕ ನಾಯಕಿಯಾಗಿ ಮೋಡಿ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕು.