Select Your Language

Notifications

webdunia
webdunia
webdunia
webdunia

ಕಾಮಿಡಿ ಮಾಡೋದು ಕಷ್ಟ ಕಣ್ರಿ...

ಕಾಮಿಡಿ ಮಾಡೋದು ಕಷ್ಟ ಕಣ್ರಿ...
ಇತರ ಚಿತ್ರಗಳಿಗಿಂತ ಕಾಮಿಡಿ ಚಿತ್ರ ಮಾಡುವುದು ಸವಾಲಿನ ಕೆಲಸ. ನನಗಿಷ್ಟವಾಗುವ ಹಾಸ್ಯ ಸನ್ನಿವೇಶವೊಂದು ಇತರರಿಗೆ ಸಾಮಾನ್ಯವಾಗಬಹುದು. ಎಲ್ಲಾ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುವಾಗ ಸಾಕಷ್ಟು ಪ್ರಯೋಗಗಳನ್ನು ನಡೆಸಬೇಕಾಗುತ್ತದೆ ಎಂದು ತಮ್ಮ ಅನುಭವ ಹೇಳಿಕೊಂಡರು ನಿರ್ದೇಶಕ ಮೋಹನ್.

ಅವರು ಕೃಷ್ಣ ನೀ ಲೇಟಾಗ್ ಬಾರೋ ಎಂಬ ಕಾಮಿಡಿ ಚಿತ್ರ ನಿರ್ದೇಶಿಸುತಿದ್ದಾರೆ. ಹೆಚ್ಚಿನ ಭಾಗ ಚಿತ್ರೀಕರಣಗೊಂಡಿದ್ದು, ಕ್ಲೈಮ್ಯಾಕ್ಸ್ ಚಿತ್ರಿಸಬೇಕಾಗಿದೆ. ಕ್ಲೈಮ್ಯಾಕ್ಸ್‌‌ನಲ್ಲಿ ಚಿತ್ರದಲ್ಲಿನ ಎಲ್ಲಾ 14 ಪಾತ್ರಗಳೂ ಇರಬೇಕು. ಎಲ್ಲರನ್ನೂ ಸೇರಿಸುವುದೇ ಮೋಹನ್‌‌ಗೆ ಕಷ್ಟವಾಗುತ್ತಿದೆಯಂತೆ.

ಕೇರಳದ ರೆಸಾರ್ಟ್‌‌‌ವೊಂದರಲ್ಲಿ ಈ ದೃಶ್ಯವನ್ನು ಚಿತ್ರಿಸಲಾಗುತ್ತಿದ್ದು, ಫೆಬ್ರುವರಿ ಮೊದಲ ವಾರದಲ್ಲಿ ಅಲ್ಲಿಗೆ ಪಯಣ ಬೆಳೆಸುವುದಾಗಿ ಅವರು ಹೇಳುತ್ತಾರೆ. ಬಾಕಿ ಇರುವ ಎರಡು ಹಾಡುಗಳನ್ನು ಕೂಡಾ ಅಲ್ಲಿಯೇ ಚಿತ್ರೀಕರಿಸುತ್ತಾರಂತೆ.

ಕಳೆದ ವರ್ಷ ತಮಗೆ ಅಷ್ಟೊಂದು ಅದೃಷ್ಟದಾಯಕವಾಗಿರಲಿಲ್ಲ ಎನ್ನುವ ಮೋಹನ್, ಅವರು ಸಂಭಾಷಣೆ ಬರೆದ ಲವ-ಕುಶ ಚಿತ್ರ ಮಕಾಡೆ ಮಲಗಿತು. ಇದೀಗ ಈ ಹೊಸ ಹಾಸ್ಯ ಚಿತ್ರದ ಮೂಲಕ ಹಿಂದಿನ ಕಹಿಯನ್ನು ಮರೆಯುತ್ತೇನೆ ಎನ್ನುತ್ತಾರೆ ಮೋಹನ್. ಈ ಚಿತ್ರದಲ್ಲಿ ಇವರು ಫ್ಯಾಶನ್ ಫೋಟೋಗ್ರಾಫರ್ ಪಾತ್ರದಲ್ಲಿದ್ದಾರೆ. ರಮೇಶ್ ಮಹಿಳಾ ಕಾಲೇಜಿನ ಉಪನ್ಯಾಸಕರಾಗಿ ನಟಿಸುತ್ತಿದ್ದಾರೆ.

Share this Story:

Follow Webdunia kannada