ಕನ್ನಡ ಚಿತ್ರರಂಗದಲ್ಲಿ ಸೆಟ್ಟೇರುತ್ತಿರುವ ಚಿತ್ರಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಎಷ್ಟು ಬೇಗ ಸಟ್ಟೇರುತ್ತವೋ ಅಷ್ಟೇ ಬೇಗ ಹೆಸರಿಲ್ಲದೆ ತೋಪೆದ್ದು ಹೋಗುತ್ತವೆ. ಕೆಲವಂತೂ ಸೆಟ್ಟೇರದಷ್ಟೇ ವೇಗವಾಗಿ ಅರ್ಧಕ್ಕೆ ಚಿತ್ರೀಕರಣವೂ ನಿಂತು ಹೋಗುತ್ತವೆ.
ಇಂದು ನಾಲ್ಕು ಚಿತ್ರಗಳು ಸೆಟ್ಟೇರುತ್ತಿವೆ. ಪ್ರೇಮಿಸಂ, ಇದು ಚಕ್ರವೂಹ, ಈ ಫೀಲ್ಡ್ನಲ್ಲಿ ಮಂಡ್ಯದ ಹುಡುಗರು ಹಾಗೂ ಹೋರಿ.
ಪ್ರೇಮಿಸಂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ರತ್ನಜ ಅವರು. ನಾಯಕನಾಗಿ ಅಜಯ್ ಗೌಡ, ನಾಯಕಿಯಾಗಿ ಅಮೂಲ್ಯ ಅಭಿನಯಿಸುತ್ತಿದ್ದಾರೆ. ಇದು ಚಕ್ರವೂಹ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಯೂವಿ. ಈ ಫೀಲ್ಡ್ನಲ್ಲಿ ಮಂಡ್ಯದ ಹುಡುಗರು ಚಿತ್ರವನ್ನು ಅಫ್ತಾಬ್‌ಖಾನ್ ಮತ್ತು ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಹೋರಿ ಚಿತ್ರವನ್ನು ನಾಗೇಂದ್ರ ಮಾಗಡಿ ನಿರ್ದೇಶನ ಮಾಡುತ್ತಿದ್ದಾರೆ.
ಇದರಲ್ಲಿ ಎಷ್ಟು ಚಿತ್ರ ತಮ್ಮ ಗೆಲುವನ್ನು ಕಾಣುತ್ತವೆಯೋ ಗೊತ್ತಿಲ್ಲ. ಆದರೆ, ಒಳ್ಳೆಯ ಚಿತ್ರ ಬರಲಿ ಅನ್ನುವ ನಿರೀಕ್ಷೆಯಿಂದ ಮಾತ್ರ ಪ್ರೇಕ್ಷಕ ಪ್ರಭು ಕಾಯುತ್ತಿರುವುತ್ತಾನೆ ಅನ್ನೋದು ಚಿತ್ರ ನಿರ್ಮಿಸುವವರಿಗೆ ಗೊತ್ತಿದ್ದರೆ ಸಾಕು.