ಅದು ಅಟೋ ಚಿತ್ರತಂಡದ ಕರೆದ ಸಂತೋಷ ಕೂಟ. ದೊಡ್ಡ ಸ್ಟಾರ್‌ಗಳ ಚಿತ್ರಗಳೇ ವಾರದೊಳಗಡೆ ಥಿಯೇಟರ್‌ನಿಂದ ಎತ್ತಂಗಡಿಯಾಗುತ್ತಿರುವಾಗಲೇ ಹೊಸಬರ ಚಿತ್ರವೊಂದು ಯಶಸ್ವಿ 30 ದಿನ ದಾಟಿ ಮುನ್ನುಗ್ಗುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.
ಅಟೋ ಚಿತ್ರವನ್ನು ಮಹೇಂದರ್ ಮುನೋತ್ ನಿರ್ಮಿಸಿ, ಮಲ್ಲಿಕಾರ್ಜುನ ಮುತ್ತಲಗೇರಿ ನಿರ್ದೇಶಿಸಿದ್ದರು. ಚಿತ್ರದಲ್ಲಿ ಸತ್ಯಾ ಎಂಬ ಹೊಸ ಹುಡುಗ ನಟಿಸಿದ್ದರು. ಚಿತ್ರದ ಕಥೆ, ನಿರೂಪಣೆಯಲ್ಲಿ ಹೊಸತನವಿದ್ದ ಕಾರಣ ಗಾಂಧಿನಗರದ ಸಿನಿ ಪಂಡಿತರು ಕೂಡಾ ಅಟೋದತ್ತ ಒಮ್ಮೆ ತಿರುಗಿ ನೋಡಿದಂತು ನಿಜ.
ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ನಾಲ್ಕು ವಾರ ಪೂರೈಸಿದ ಖುಷಿಯಲ್ಲಿದ್ದರು ಮಲ್ಲಿಕಾರ್ಜುನ ಮುತ್ತಲಗೇರಿ. ಹಾಗಾಗಿ ಅವರಿಂದ ಮಾತುಗಳೇ ಹೊರಡಲಿಲ್ಲ. ನಾಯಕ ಸತ್ಯಾ ಚಿತ್ರ ನೂರು ದಿನ ಪೂರೈಸಲಿ ಎಂದರು. ಒಟ್ಟು ಚಿತ್ರತಂಡ ಸಂತಸ ಹಂಚಿಕೊಂಡಿತು. ಮುಂದೆಯೂ ಉತ್ತಮ ಚಿತ್ರ ನೀಡುವುದಾಗಿ ಘೋಷಣೆ ಮಾಡಿಯೇ ಬಿಟ್ಟಿತು.