Select Your Language

Notifications

webdunia
webdunia
webdunia
webdunia

ಕಲೆಕ್ಷನ್ ನಲ್ಲಿ ದಾಖಲೆ ನಿರ್ಮಿಸಿದ ಜೂಮ್ ಸಿನಿಮಾ

ಕಲೆಕ್ಷನ್ ನಲ್ಲಿ ದಾಖಲೆ ನಿರ್ಮಿಸಿದ ಜೂಮ್ ಸಿನಿಮಾ
, ಗುರುವಾರ, 7 ಜುಲೈ 2016 (08:33 IST)
ಗಣೇಶ್ ಹಾಗೂ ರಾಧಿಕಾ ಪಂಡಿತ್ ಅವರು ಸಿನಿಮಾ ಮಾಡುತ್ತಾರೆ ಅನ್ನೋವಾಗಲೇ ಅಭಿಮಾನಿಗಳು ಫುಲ್ ಖುಷಿಯಾಗಿದ್ರು. ಇನ್ನು ಸಿನಿಮಾ ರಿಲೀಸ್ ಆದ ದಿನವಂತೂ ಅಭಿಮಾನಿಗಳು ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಇದೀಗ ಜೂಮ್ ಸಿನಿಮಾ ಅಭಿಮಾನಿಗಳಿಗೆ ಮಾತ್ರವಲ್ಲದೇ ಕಲೆಕ್ಷನ್ ನಲ್ಲೂ ನಾನೇನು ಕಡಿಮೆಯಿಲ್ಲ ಅನ್ನೋದನ್ನು  ತೋರಿಸಿಕೊಟ್ಟಿದೆ.

ಹೌದು... ಆರಂಭದಿಂದಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿ ಹಾಕುತ್ತಲೇ ಬಂದಿರುವ ಜೂಮ್ ಸಿನಿಮಾ ಇದೀಗ ಬಾಕ್ಸಾಫೀಸ್‌ನಲ್ಲೂ ಭಾರೀ ಕಮಾಲ್ ಮಾಡಿದೆ. ಸಿನಿಮಾ ಬಿಡುಗಡೆಯಾದ ಕೇವಲ ಮೂರು ದಿನದಲ್ಲೇ ಬರೋಬ್ಬರಿ 5ಕೋಟಿಯ 43 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಇನ್ನು ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಈ ಸಿನಿಮಾ ಒಂದು ಕೋಟಿಯ 45 ಲಕ್ಷ ರೂಪಾಯಿಗಳನ್ನು ಕಲೆಕ್ಷನ್ ಮಾಡೋ ಮೂಲಕ ದಾಖಲೆ ನಿರ್ಮಿಸಿದೆ. ಅಂದ್ಹಾಗೆ ಮೂರು ದಿನಗಳಲ್ಲಿ ಜೂಮ್ ಸಿನಿಮಾ ಬರೋಬ್ಬರಿ 2,500 ಪ್ರದರ್ಶನ ಕಂಡಿದೆ. ಅಲ್ಲದೇ ಬರೋಬ್ಬರಿ 11 ಲಕ್ಷ ಜನ ಈ ಸಿನಿಮಾವನ್ನು ನೋಡಿದ್ದಾರೆ ಅಂತಾ ಸಿನಿಮಾ ತಂಡ ಹೇಳಿದೆ.ಅದರಲ್ಲೂ ಅಚ್ಚರಿಯ ವಿಚಾರ ಅಂದ್ರೆ ಕನ್ನಡೇತರ ಸಿನಿಮಾ ಥಿಯೇಟರ್ ಗಳಲ್ಲೂ ಸಿನಿಮಾ ಹೌಸ್ ಪುಲ್ ಪ್ರದರ್ಶನ ಕಂಡಿದೆಯಂತೆ.
 
ಇನ್ನು ಸಿನಿಮಾ ಓವರ್ ಸೀಸ್ ರೈಟ್ ಬರೋಬ್ಬರಿ 30 ಲಕ್ಷ ರೂಪಾಯಿಗೆ ಸೇಲ್ ಆಗಿದೆಯಂತೆ.ಅದರಲ್ಲೂ ಸುಮಾರು 200 ಥಿಯೇಟರ್ ಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇನ್ನು ಗಣೇಶ್ ಅವರ ಸಿನಿಮಾ ಇಷ್ಟೊಂದು  ಗಳಿಕೆ ಮಾಡುತ್ತಿರೋದು ಅವರ ವೃತ್ತಿ ಬದುಕಿನಲ್ಲಿ ಅವರಿಗೆ ಹೊಸ ತಿರುವು ನೀಡುತ್ತೆ ಅಂತಿದ್ದಾರೆ ಅಭಿಮಾನಿಗಳು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ್-ಇಲಿಯಾನಾ ಡಿಸೋಜಾ ಅಭಿನಯದ 'ರುಸ್ತುಮ್ 'ಚಿತ್ರ ಸಾಂಗ್ ರಿಲೀಸ್