Select Your Language

Notifications

webdunia
webdunia
webdunia
webdunia

ಅಕ್ಷಯ್-ಇಲಿಯಾನಾ ಡಿಸೋಜಾ ಅಭಿನಯದ 'ರುಸ್ತುಮ್ 'ಚಿತ್ರ ಸಾಂಗ್ ರಿಲೀಸ್

ಅಕ್ಷಯ್-ಇಲಿಯಾನಾ ಡಿಸೋಜಾ ಅಭಿನಯದ 'ರುಸ್ತುಮ್ 'ಚಿತ್ರ ಸಾಂಗ್ ರಿಲೀಸ್
ಮುಂಬೈ , ಬುಧವಾರ, 6 ಜುಲೈ 2016 (19:50 IST)
ಮೊನ್ನೆ ರುಸ್ತುಮ್ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು, ಇದೀಗ ಚಿತ್ರದ ರೋಮ್ಯಾಂಟಿಕ್ ಹಾಡು ಬಿಡುಗಡೆಗೊಂಡಿದ್ದು, ಈ ಹಾಡಿನಲ್ಲಿ ಅಕ್ಕಿ ಹಾಗೂ ಇಲಿಯಾನ್ ರೋಮ್ಯಾನ್ಸ್ ಮಾಡುವುದರ ಮೂಲಕ ಮೋಡಿ ಮಾಡಲಿದ್ದಾರೆ. ಚಿತ್ರದ ಮೊದಲ ರೋಮ್ಯಾಂಟಿಕ್ ಸಾಂಗ್ 'ತೇರಾ ಸಂಗ್ ಆ್ಯರಾ' ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. 

ಚಿತ್ರದಲ್ಲಿ ಫಸ್ಟ್ ಸೈಟ್‌ಗೆ ಇಲಿಯಾನಾ ಪ್ರೀತಿಯ ಬಲೆಗೆ ಬೀಳುವ ನಾಯಕ ನಟ ಅಕ್ಷಯ್, ತಮ್ಮದೇ ಆದ ಸ್ಟೈಲ್ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಮದುವೆಯಾಗುವಂತೆ ಪ್ರಪೋಸ್ ಮಾಡುತ್ತಾರೆ. 
 
ಹೊಸ ಅವತಾರದಲ್ಲಿ ಅಕ್ಷಯ್ ಮಿಂಚಿದ್ದಾರೆ. ಹೊಸ ಅವತಾರದಲ್ಲಿ ಅಕ್ಕಿ ಚುರುಕಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಪೋಸ್ಟರ್‌ನಲ್ಲಿ ಅವರು ಸಖತ್ ಹ್ಯಾಂಡ್‌ಸಮ್ ಆಗೇ ಕಾಣಿಸಿಕೊಂಡಿದ್ದರು. 48  ನೌಕಾಸೇನೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಕ್ಷಯ್ ಟ್ವಿಟ್ ಮಾಡಿದ್ದರು. ರುಸ್ತುಮ್ ಚಿತ್ರ ಅಗಸ್ಟ್ 12ರಂದು ಬಿಡುಗಡೆಯಾಗಲಿದೆ.
 
ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಕ್ಷಯ್‌ ಅವರ ಮುಂದನ ಚಿತ್ರ 'ರುಸ್ತುಮ್' ನೋಡಲು ಅವರ ಅಭಿಮಾನಿಗಳ ಕಾತುರದಲ್ಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಡಿ ಬೊರ್ಮನ್ ಆತ್ಮಚರಿತ್ರೆ ಚಿತ್ರ ಮೂಡಿ ಬರಬೇಕು :ಇರ್ಫಾನ್ ಖಾನ್