Webdunia - Bharat's app for daily news and videos

Install App

ಆಯುಧಪೂಜೆಯಂದೇ ಗುಡ್‌ನ್ಯೂಸ್‌ ಕೊಟ್ಟ ಯುವ: ಹೊಸ ಚಿತ್ರದ ಪೋಸ್ಟರ್‌ ರಿಲೀಸ್‌

Sampriya
ಶುಕ್ರವಾರ, 11 ಅಕ್ಟೋಬರ್ 2024 (15:38 IST)
Photo Courtesy X
ಬೆಂಗಳೂರು: ಯುವ ಸಿನಿಮಾ ಯಶಸ್ಸಿನಲ್ಲಿರುವ ಯುವ ರಾಜ್‌ಕುಮಾರ್ ಮುಂದಿನ ಸಿನಿಮಾದ ಬಗ್ಗೆ ಅಪ್‌ಡೇಟ್‌ ಕೊಟ್ಟಿದ್ದಾರೆ. ಇಂದು ಆಯುಧ ಪೂಜೆಯ ದಿನದಂದೇ ಹೊಸ ಚಿತ್ರದ ಪೋಸ್ಟರ್ ಶೇರ್ ಮಾಡಿದ್ದಾರೆ. ಈ ಮೂಲಕ ಅಧಿಕೃತವಾಗಿ ಮುಂದಿನ ಸಿನಿಮಾ ಯುವ 02 ಕುರಿತು ಮಾಹಿತಿ ನೀಡಿದ್ದಾರೆ.

ಸದ್ಯ ಯುವ, ರಕ್ತ ಸಿಕ್ತವಾಗಿರುವ ಪೋಸ್ಟರ್‌ ಶೇರ್‌ ಮಾಡಿದ್ದಾರೆ. ಚಿತ್ರದ ಪೋಸ್ಟರ್‌ ಲುಕ್‌ ನೋಡಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಯುವ 02 ಎಂದು ಚಿತ್ರವನ್ನು ಹೆಸರಿಸಲಾಗಿದೆ. ರತ್ನನ್ ಪ್ರಪಂಚ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ‌ ಜೊತೆ ಯುವ ಹೊಸ ಸಿನಿಮಾ ಮಾಡುತ್ತಿದ್ದಾರೆ.

ಇನ್ನೂ ಪೋಸ್ಟರ್ ಅನ್ನು ಸರಿಯಾಗಿ ಗಮನಿಸಿದರೆ ಯುವ ಕೈ ಮೇಲೆ ರತ್ನ ಎನ್ನುವ ಹಚ್ಚೆ ಇರುವುದನ್ನು ನೋಡಬಹುದು. ಚಿತ್ರದಲ್ಲಿ ರತ್ನ ಯಾರು? ನಾಯಕನ ತಾಯಿನಾ? ಅಥವಾ ಸಹೋದರಿನಾ? ಇಲ್ಲ ಪ್ರೇಯಸಿನಾ? ಆಕೆಗಾಗಿಯೇ ಈ ರಕ್ತ ಚರಿತ್ರೆ ನಡೆಯುತ್ತಾ? ಎನ್ನುವ ಪ್ರಶ್ನೆಗಳಿಗೆಲ್ಲಾ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ.

ಯುವ ರಾಜ್‌ಕುಮಾರ್ ನಟನೆಯ ಮುಂದಿನ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಮತ್ತು ಭೋಗೇಂದ್ರ, ಕೆಆರ್‌ಜಿ ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ.  ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ನವೆಂಬರ್ 2ರಂದು ಚಿತ್ರತಂಡ ಅನೌನ್ಸ್ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಗುಜರಾತ್‌ನಿಂದ ಎಮ್ಮೆ ಖರೀದಿಸಲು ಹೋಗಿ ಟೋಪಿ ಹಾಕಿಕೊಂಡ ನಿರ್ದೇಶಕ ಜೋಗಿ ಪ್ರೇಮ್

ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೂಲಿ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments