Select Your Language

Notifications

webdunia
webdunia
webdunia
webdunia

ಮಹಿಳೆಯರು ಕೆಟ್ಟವರಾಗಿದ್ದರೆ ಹಾಸಿಗೆ ಹಂಚಿಕೊಳ್ಳಬಹುದಂತೆ!

ಮಹಿಳೆಯರು ಕೆಟ್ಟವರಾಗಿದ್ದರೆ ಹಾಸಿಗೆ ಹಂಚಿಕೊಳ್ಳಬಹುದಂತೆ!
Kocchi , ಗುರುವಾರ, 6 ಜುಲೈ 2017 (10:46 IST)
ಕೊಚ್ಚಿ: ಮಹಿಳೆಯರು ಕೆಟ್ಟವರಾಗಿದ್ದರೆ ಅವರ ಜತೆ ಹಾಸಿಗೆ ಹಂಚಿಕೊಳ್ಳಲೂಬಹುದು! ಹೀಗಂತ ಮಲಯಾಳಂ ಚಿತ್ರರಂಗದ ಖ್ಯಾತ ಪೋಷಕ ನಟ ಇನ್ನಸೆಂಟ್ ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.


ಸಂಸದ ಹಾಗೂ ನಟ ಇನ್ನಸೆಂಟ್ ಇತ್ತೀಚೆಗೆ ಕೇರಳ ಮೂಲದ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಇದೀಗ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಬಹುಭಾಷಾ ತಾರೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಖ್ಯಾತ ನಟರೊಬ್ಬರ ಮೇಲೆ ಆರೋಪವಿದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಕಲಾವಿದರ ಸಂಘ  ‘ಅಮ್ಮ’ದ ಅಧ್ಯಕ್ಷರೂ ಆಗಿರುವ ಇನ್ನಸೆಂಟ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕಾಸ್ಟಿಂಗ್ ಕೋಚ್ ಬಗ್ಗೆ ಪ್ರಶ್ನೆ ಕೇಳಿದಾಗ ಇನ್ನಸೆಂಟ್ ಇಂತಹದ್ದೊಂದು ಎಡವಟ್ಟು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುರುಕ್ಷೇತ್ರದಲ್ಲಿ ದ್ರೌಪದಿಯಾಗ್ತಾರಾ ನಯನತಾರಾ..?