Webdunia - Bharat's app for daily news and videos

Install App

ಬಿಜಿಎಸ್ ಉತ್ಸವದಲ್ಲಿ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಯಶ್

Webdunia
ಗುರುವಾರ, 23 ನವೆಂಬರ್ 2023 (16:00 IST)
Photo Courtesy: Twitter
ಬೆಂಗಳೂರು: ಕೆಜಿಎಫ್ ‍ಆದ ಮೇಲೆ ಸುದ್ದಿಯೇ ಇಲ್ಲ ಎನ್ನುತ್ತಿರುವ ಫ್ಯಾನ್ಸ್ ಗಳಿಗೆ ರಾಕಿಂಗ್ ಸ್ಟಾರ್ ಯಶ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಯಶ್ ಮುಂದಿನ ಸಿನಿಮಾ ಅಪ್ ಡೇಟ್ ಕೇಳಲು ಕಾದು ಕಾದು ಸಿನಿಮಾ ಪ್ರೇಮಿಗಳಿಗೇ ಸುಸ್ತಾಗಿದೆ. ಬರೋಬ್ಬರಿ ಒಂದೂವರೆ ವರ್ಷವಾದರೂ ತಮ್ಮ ಮುಂದಿನ ಸಿನಿಮಾ ಯಾವ ಬ್ಯಾನರ್ ಜೊತೆಗೆ ಎಂದೂ ಗುಟ್ಟುಬಿಟ್ಟುಕೊಟ್ಟಿಲ್ಲ.

ಇಂದು ಬಿಜಿಎಸ್ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ನನಗೆ ನಿಮ್ಮ ಕಾಯುವಿಕೆ ಅರ್ಥವಾಗುತ್ತದೆ. ಆದರೆ ನಾನು ಸುಮ್ಮನೇ ಕೂತಿಲ್ಲ. ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ಎಲ್ಲರೂ ಹೆಮ್ಮೆಪಡುವಂತಹಾ ಕೆಲಸವನ್ನೇ ಮಾಡುತ್ತೇನೆ.

ನಾನು ಯಾವತ್ತು ನನ್ನ ಸಿನಿಮಾ ಅನೌನ್ಸ್ ಮಾಡುತ್ತೇನೆಂದು ಹೇಳಿಲ್ಲ. ಹಾಗಿದ್ದರೂ ಪ್ರತಿ ಹಬ್ಬ ಬಂದಾಗ, ಹುಟ್ಟುಹಬ್ಬ ಬಂದಾಗ ಯಶ್ ಸಿನಿಮಾ ಘೋಷಣೆ ಮಾಡ್ತಾರೆ ಎಂದು ಸುದ್ದಿ ಹಾಕ್ತಾರೆ. ಇದರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಎಲ್ಲ ಊಟ ರೆಡಿ ಆದ ಮೇಲೇ ಬಡಿಸಿದರೇ ಚೆನ್ನ. ಅರ್ದಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆದರೆ ಸರಿ ಹೋಗಲ್ಲ. ನೀವೆಲ್ಲರೂ ಹೆಮ್ಮೆಪಡುವಂತಹಾ ಕೆಲಸ ಮಾಡುತ್ತೇನೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments