Webdunia - Bharat's app for daily news and videos

Install App

ಈ ಬಾರಿ ಬರ್ತ್ ಡೇಗೂ ಫ್ಯಾನ್ಸ್ ಗೆ ನಿರಾಸೆ ಮಾಡಿದ ಯಶ್

Krishnaveni K
ಶುಕ್ರವಾರ, 5 ಜನವರಿ 2024 (10:35 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜನವರಿ 8 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಯಶ್ ರನ್ನು ಹುಟ್ಟುಹಬ್ಬ ದಿನ ಭೇಟಿ ಮಾಡಬಹುದು ಎಂದುಕೊಂಡಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿದ್ದು, ನಾನು ಈ ಬಾರಿಯೂ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.

ಯಶ್ ಇದೀಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ನಿಮಿತ್ತ ಯಶ್ ಇತ್ತೀಚೆಗಷ್ಟೇ ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ನಿಮ್ಮನ್ನು ಖುದ್ದಾಗಿ ಭೇಟಿ ಮಾಡಲಾಗುತ್ತಿಲ್ಲ ಎಂದಿದ್ದಾರೆ.

‘ನನಗೂ ನಿಮ್ಮ ಜೊತೆ ಇರಬೇಕೆಂಬ ಬಯಕೆಯಿದೆ. ಆದರೆ ಸಿನಿಮಾ ಕೆಲಸ ನಿಮಿತ್ತ ಪ್ರಯಾಣ ಮಾಡಲೇಬೇಕಿದೆ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು ನಂಬಿದ್ದೇನೆ. ಸದಾ ಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ’ ಎಂದು ಯಶ್ ಬರೆದುಕೊಂಡಿದ್ದಾರೆ. ಅವರ ಈ ಸಂದೇಶ ಅಭಿಮಾನಿಗಳಿಗೆ ನಿರಾಸೆ ಮೂಡಿದರೂ ಟಾಕ್ಸಿಕ್ ಸಿನಿಮಾ ಶುರುವಾಗುತ್ತಿದೆಯಲ್ಲಾ ಎಂಬ ಸಮಾಧಾನವೂ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಮುಂದಿನ ಸುದ್ದಿ
Show comments