Webdunia - Bharat's app for daily news and videos

Install App

ಬರಲಿದೆಯಾ ವಂಚಕ ಸುಕೇಶ್ ಕುರಿತ ಸಿನಿಮಾ?

Webdunia
ಶನಿವಾರ, 18 ಮಾರ್ಚ್ 2023 (11:38 IST)
ಗಣ್ಯಾತಿಗಣ್ಯರು, ರಾಜಕಾರಣಿಗಳು, ತಾರೆಯರಿಗೆ ನೂರಾರು ಕೋಟಿ ರೂ.ಗಳನ್ನು ವಂಚಿಸಿರುವ ಸುಕೇಶ್ ಚಂದ್ರಶೇಖರ್ ಕುರಿತ ಸಿನಿಮಾ ಬರಲಿದೆಯಾ ಎಂಬ ಮಾತು ಬಲವಾಗಿ ಕೇಳಿ ಬರ್ತಿದೆ.. ಬಾಲಿವುಡ್ ನಿರ್ದೇಶಕ ಆನಂದ್ ಕುಮಾರ್ ಇಂತದ್ದೊಂದು ಲೆಕ್ಕಾಚಾರ ಮಾಡಿದ್ದಾರೆಂದು ಮೂಲಗಳು ಹೇಳಿವೆ. ದೆಹಲಿಯ ತಿಹಾರ್ ಜೈಲಿನ SP ಜೈಲರ್ ದೀಪಕ್ ಶರ್ಮ ಪ್ರತಿಕ್ರಿಯಿಸಿ, ಸುಕೇಶ್ ಚಂದ್ರಶೇಖರ್ ಪ್ರಕರಣದ ಬಗ್ಗೆ ಜನರಲ್ಲಿ ಬಹಳ ಕುತೂಹಲವಿದೆ ಎಂದು ಹೇಳಿದ್ದಾರೆ. ಮದ್ರಾಸ್ ಕೆಫೆ ಸಿನಿಮಾ ನಟಿ ಲೀನಾ ಮಾರಿಯಾ ಪೌಲ್ ಅವರನ್ನು ವಿವಾಹವಾಗಿರುವ ಸುಕೇಶ್, ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್​​​ರೊಂದಿಗೂ ಸಂಬಂಧ ಹೊಂದಿದ್ದು ಖಚಿತವಾಗಿದೆ. ಜಾಕ್ವೆಲಿನ್ ಸೇರಿದಂತೆ ಅನೇಕ ನಟಿಯರನ್ನು ಬುಟ್ಟಿಗೆ ಹಾಕಿಕೊಂಡು, ಅವರಿಗೂ ಕೋಟ್ಯಂತರ ರೂಪಾಯಿ ವಂಚನೆಯ ಹಣವನ್ನು ಕೊಡುಗೆಯಾಗಿ ನೀಡಿದ್ದಾನೆ ಎಂಬ ಆರೋಪಗಳಿವೆ. ರ್ಯಾನ್ ಬ್ಯಾಕ್ಸಿ ಎಂಬ ಔಷಧ ಕಂಪನಿಯ ಮಾಜಿ ಮಾಲಿಕ ಶಿವಿಂದರ್ ಸಿಂಗ್ ಪತ್ನಿ ಅದಿತಿ ಸಿಂಗ್​ಗೆ 200 ಕೋಟಿ ರೂಪಾಯಿ ವಂಚಿಸಿದ್ದಾರೆ. AIADMKಯ ಶಶಿಕಲಾ ಬಣಕ್ಕೆ ಪಕ್ಷದ ಚಿಹ್ನೆ ಸಿಗುತ್ತದೆ ಎಂದು ಭರವಸೆ ನೀಡಿಯೂ ವಂಚಿಸಿದ್ದಾರೆ. ಅವರಿಂದ ಮೋಸ ಹೋದ ಹಲವಾರು ಮಂದಿ ದೂರು ನೀಡಿದ್ದಾರೆ. ಈತನ ಬದುಕೇ ಸಿನಿಮಾ ಕಥೆಯಂತಿರುವ ಕಾರಣ ಅದನ್ನೇ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರಂತೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

ಮುಂದಿನ ಸುದ್ದಿ
Show comments