Select Your Language

Notifications

webdunia
webdunia
webdunia
webdunia

ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಾರಾ ಅಂಕಿತಾ ಲೋಖಂಡೆ

ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಾರಾ ಅಂಕಿತಾ ಲೋಖಂಡೆ
, ಶುಕ್ರವಾರ, 1 ಜುಲೈ 2016 (09:03 IST)
ಪವಿತ್ರಾ ರಿಶ್ತಾ ಧಾರಾವಾಹಿಯ ಮೂಲಕ ಮನೆ ಮನೆಗೂ ಪರಿಚಯವಾದ ಪ್ರತಿಭೆ ಅಂಕಿತಾ ಲೋಖಂಡೆ. ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಂಕಿತಾ ಲೋಖಂಡೆ ಅವರ ನಡುವೆ ಪ್ರೀತಿ ಹುಟ್ಟಿಕೊಂಡದ್ದು ಇದೇ ಧಾರಾವಾಹಿ ಮೂಲಕ. ಆದ್ರೆ ಬಹು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ದೂರ ದೂರ. ಈ ನಡುವೆ ಇಬ್ಬರು ಕೂಡ ತಮ್ಮ ತಮ್ಮ ಸಂಗಾತಿಯನ್ನು ಹುಡುಕಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಹೀಗಿರುವಾಗಲೇ ಅಂಕಿತಾ ತಮ್ಮ ಅಭಿಮಾನಿಗಳಿಗೆ ಸಂತಸ ಸುದ್ದಿಯೊಂದನ್ನು ನೀಡಿದ್ದಾರೆ.

 
ಅಂದ್ಹಾಗೆ ಪವಿತ್ರ ರಿಶ್ತಾ ಸೀರಿಯಲ್ ಮೂಲಕ ಕೋಟ್ಯಂತರ ಅಭಿಮಾನಿಗಳ ದಿಲ್ ಕದ್ದಿದ್ದ ಅಂಕಿತಾ ಅವರನ್ನು ನಾವು ಬೆಳ್ಳಿತೆರೆಯ ಮೇಲೆ ಯಾವಾಗ ನೋಡುತ್ತೇವೆ ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ ಅಭಿಮಾನಿಗಳ ಕಾಯುವಿಕೆಗೆ ಈಗ ಉತ್ತರ ಸಿಗುವಂತಹ ಕಾಲ ಹತ್ತಿರವಾಗಿದೆ .ಅಂಕಿತಾ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ವೇದಿಕೆ ಸಿದ್ಧವಾಗುತ್ತಿದೆಯಂತೆ. ಅಂದ್ಹಾಗೆ ಅಂಕಿತಾ ಅವರ ಅದೃಷ್ಟ ಅಂದ್ರೆ ಅವರು ಮೊದಲ ಸಿನಿಮಾದಲ್ಲೇ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ಕೆಲಸ ಮಾಡುತ್ತಿದ್ದಾರಂತೆ.
 
ಅಂದ್ಹಾಗೆ ಸಂಜಯ್ ಲೀಲಾ ಬಸ್ನಾಲಿ ಅವರು ತಮ್ಮ ಈ ಹಿಂದಿನ ಸಿನಿಮಾಗಳ ಸೂಪರ್ ಹಿಟ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರೋದು ನಿಮಗೆಲ್ಲಾ ಗೊತ್ತೆ ಇದೆ. ರಾಣಿ ಪದ್ಮಾವತಿ ಅನ್ನೋ ಸಿನಿಮಾ ಮಾಡುತ್ತಿದ್ದಾರೆ ಬನ್ಸಾಲಿ. ಬನ್ಸಾಲಿ ಅವರ ಈ ಸಿನಿಮಾದಲ್ಲಿ ಅಂಕಿತಾ ಲೋಖಂಡೆ ಅವರು ಕೂಡ ಅಭಿನಯಿಸುತ್ತಿದ್ದಾರಂತೆ ಅಂತಾ ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ಅಂಕಿತಾ ಮುಂಬೈನಲ್ಲಿರುವ ಬನ್ಸಾಲಿ ಅವರ ಕಚೇರಿಗೆ ಹೋಗಿ ಗಂಟಗಟ್ಟಲೇ ಚರ್ಚೆ ನಡೆಸಿ ಬಂದಿದ್ದಾರಂತೆ.ಅಂದ್ಹಾಗೆ ಸಿನಿಮಾದಲ್ಲಿ ರಾಣಿ ಪದ್ಮಾವತಿ ಪಾತ್ರವನ್ನು ದೀಪಿಕಾ ಪಡುಕೋಣೆ ಅವರು ಮಾಡಲಿದ್ದಾರಂತೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೃತಿಕ್ ರೋಷನ್ ಅವರ ಬಗ್ಗೆ ಕೇಳಿದ್ದಕ್ಕೆ ಸುಮ್ಮನಾದ ಕಂಗನಾ