Select Your Language

Notifications

webdunia
webdunia
webdunia
webdunia

ಹೃತಿಕ್ ರೋಷನ್ ಅವರ ಬಗ್ಗೆ ಕೇಳಿದ್ದಕ್ಕೆ ಸುಮ್ಮನಾದ ಕಂಗನಾ

ಹೃತಿಕ್ ರೋಷನ್ ಅವರ ಬಗ್ಗೆ ಕೇಳಿದ್ದಕ್ಕೆ ಸುಮ್ಮನಾದ ಕಂಗನಾ
, ಶುಕ್ರವಾರ, 1 ಜುಲೈ 2016 (08:59 IST)
ಇಷ್ಟು ದಿನ ತನ್ನ ಹಾಗೂ ಕಂಗನಾ ವಿವಾದದ ಬಗ್ಗೆ ಏನೇ ಕೇಳಿದ್ರು ಮೌನಿಯಾಗಿದ್ದ ಹೃತಿಕ್ ರೋಷನ್ ಅವರು ಮೊನ್ನೆ ಇದೇ ಮೊದಲ ಬಾರಿಗೆ ಎಂಬಂತೆ ಮೌನ ಮುರಿದ್ದರು. ಮುಂದೊಂದು ದಿನ ಎಲ್ಲವೂ ಗೊತ್ತಾಗುತ್ತೆ. ಅಲ್ಲಿಯವರೆಗೂ ನಾನೇನು ಹೇಳೋದಿಲ್ಲ ಅಂತಾ ಹೇಳೋ ಮೂಲಕ ಅನೇಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಆದ್ರೀಗ ನಟಿ ಕಂಗನಾ ಸರದಿ.

 
ಹೃತಿಕಾ ಹಾಗೂ ತನ್ನ ನಡುವಿನ ಸಂಬಂಧದ ಬಗ್ಗೆ ಜಗಜ್ಜಾಹೀರು ಮಾಡಿದ ಕಂಗನಾ ತಾನು ಹಾಗೂ ಹೃತಿಕ್ ಡೇಟಿಂಗ್ ನಲ್ಲಿ ತೊಡಗಿದ್ದವು ಅಂತಾ ಹೇಳಿದ್ದರು. ಇದೇ ವಿಚಾರ ನಾನಾ ರೀತಿಯಲ್ಲಿ ಸುದ್ದಿಯಾಗಿ ಬಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯ್ತು.ಆ ಬಳಿಕ ಇಬ್ಬರೂ ಸುಮ್ಮನಾಗಿಗದ್ದರಿಂದ ವಿವಾದ ಅಲ್ಲಿಗೆ ತಣ್ಣಗಾಯ್ತು. ಮೊನ್ನೆ ಐಫಾ ಸಮಾರಂಭದಲ್ಲಿ ಕಂಗನಾ ಅವರಲ್ಲಿ ಸಲ್ಮಾನ್ ಖಾನ್ ಅವರು ರೇಪ್ ಕುರಿತಾಗಿ ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ಕೇಳಲಾಯ್ತು.ಆಗ ಕಂಗನಾ ಏನು ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದರು. 
 
ಇರಲಿ ಬಿಡಿ ಮೇಡಮ್ ಅಂತಾ ಮೊನ್ನೆ ಫ್ಯಾಶನ್ ಮ್ಯಾಗಜಿನ್ ಒಂದರ 100ನೇ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಹೃತಿಕ್ ರೋಷನ್ ಬಗ್ಗೆ ಆದ್ರೂ ಏನಾದ್ರು ಮಾತಾಡಿ ಅಂತಾ ಕಂಗನಾ ಅವರನ್ನು ಕೇಳಿದ್ರಂತೆ. ಕಂಗನಾ ಮೇಡಮ್ ಅದಕ್ಕೂ ಬಾಯಿನೇ ಬಿಡಲಿಲ್ಲವಂತೆ.ಅಲ್ಲದೇ ದಯವಿಟ್ಟು ಬೇರೆ ಪ್ರಶ್ನೆಗಳನ್ನು ಕೇಳಿ ಅಂತಾ ಹೇಳಿದ್ರಂತೆ.
 
ಕಂಗನಾ ಅವರು ಹೃತಿಕ್ ರೋಷನ್ ಅವರ ಬಗ್ಗೆ ಸದ್ಯ ಈ ರೀತಿ ಮೌನ ತಳೆದಿರೋದು ನೋಡಿದ್ರೆ ಅಯ್ಯೋ ಸಾಕಪ್ಪಾ ಸಹವಾಸ ಅಂತಾ ಸುಮ್ಮನಾಗಿದ್ದಾರೆ ಅಂತಾ ಅನ್ನಿಸುತ್ತೆ.ಆದ್ರೆ ಹೃತಿಕ್ ರೋಷನ್ ಅವರು ಹೇಳಿದ್ದು ನೋಡಿದ್ರೆ ಮುಂದೆ ಇದೇ ವಿಚಾರ ಮತ್ತೊಂದು ರೀತಿಯಲ್ಲಿ ಸುದ್ದಿಯಾಗುತ್ತೋ ಅನ್ನೋ ಅನುಮಾನ ಕೂಡ ಕಾಯುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ವಿರಾಟ್ ಮತ್ತೆ ಒಂದಾಗೋಕೆ ಕಾರಣ ಸಲ್ಮಾನ್ ಖಾನ್ ಅವರೇನಾ?