Publish Date: Mon, 30 Mar 2026 (12:02 IST)
Updated Date: Mon, 30 Mar 2026 (12:04 IST)
ಹೈದರಾಬಾದ್: ನಟಿ ಸಾಯಿ ಪಲ್ಲವಿ ಎಲ್ಲೇ ಹೋದರೂ ಸಿಂಪಲ್ ಆಗಿ ಸೀರೆ ಉಟ್ಟಿರುತ್ತಾರೆ. ಸಾಯಿ ಪಲ್ಲವಿ ಯಾಕೆ ಯಾವಾಗಲೂ ಸೀರೆಯೇ ಉಡ್ತಾರೆ ಎನ್ನುವುದಕ್ಕೆ ಅವರೇ ಸಂದರ್ಶನವೊಂದರಲ್ಲಿ ಸೀಕ್ರೆಟ್ ಬಿಚ್ಚಿಟ್ಟಿದ್ದರು.
ಸಾಯಿ ಪಲ್ಲವಿ ಯಾವಾಗಲೂ ಸಿಂಪಲ್ ಆಗಿಯೇ ಇರುತ್ತಾರೆ. ಹೊರಗಡೆ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಇರಲಿ, ಹೊರಗೆ ಈವೆಂಟ್ ಗಳಲ್ಲಿ ಇರಲಿ ದೇಹ ತೋರಿಸುವ ಡ್ರೆಸ್ ಹಾಕೋದೇ ಇಲ್ಲ.
ಬಿಹೈಂಡ್ ವುಡ್ ಚಾನೆಲ್ ಗೆ ನೀಡಿದ್ದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಯಾಕೆ ಯಾವತ್ತೂ ಸೀರೆಯೇ ಉಡುತ್ತಾರೆ ಎಂಬುದಕ್ಕೆ ಉತ್ತರ ನೀಡಿದ್ದರು. ಸಾಯಿ ಪಲ್ಲವಿ ಹೇಳಿದ ಪ್ರಕಾರ ಅವರಿಗೆ ಸೀರೆ ಉಡುವುದು ತುಂಬಾ ಸುಲಭದ ಕೆಲಸವಂತೆ.
ನಾನು ಸೀರೆಯನ್ನು ಕೇವಲ 2 ರಿಂದ 3 ನಿಮಿಷದೊಳಗೆ ಉಟ್ಟು ಬಿಡುತ್ತೇನೆ. ಆದರೆ ನನಗೆ ಪಾಶ್ಚಿಮಾತ್ಯ ಡ್ರೆಸ್ ಹಾಕಲು ಹೆಚ್ಚು ಸಮಯ ಹಿಡಿಯುತ್ತದೆ. ಮತ್ತು ಅದು ಅಷ್ಟು ಕಂಫರ್ಟ್ ಆಗಿರುವುದಿಲ್ಲ. ಹೀಗಾಗಿ ನಾನು ಹೆಚ್ಚು ಸೀರೆಯನ್ನೇ ಉಡುತ್ತೇನೆ ಎಂದಿದ್ದರು.