ಮಧುಗಿರಿ: ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಟೋಟ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಇಂದು ಬಿಡುಗಡೆಯಾಗಿದ್ದಾರೆ.
ಜೈಲಿಂದ್ದ ಹೊರಬರುತ್ತಿದ್ದ ಹಾಗೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ನನಗೆ ನ್ಯಾಯ ಬೇಕು ಎಂದು ಅಳಲು ತೊಡಿಕೊಂಡಿದ್ದಾರೆ. ಬಂಧಿತರಾಗಿದ್ದ ಡ್ರೋನ್ ಪ್ರತಾಪ್ ಇಂದು ಮಧುಗಿರಿ ಉಪಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಒಂದೇ ಒಂದು ಪ್ರಶ್ನೇ ಕೇಳ್ತೀನಿ. ದೇಶಾದ್ಯಂತ ನೂರಾರು ಎಕ್ಸ್ ಪೆರಿಮೆಂಟ್ ಪೋಸ್ಟ್ ಮಾಡಿದ್ದಾರೆ. ಅವ್ರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲಾ, ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದೀರಾ? ಹೊರದೇಶದಲ್ಲಿರಬಹುದು, ನಮ್ಮ ದೇಶದಲ್ಲಿರಬಹುದು.ಐಪಿಸಿ ದೇಶದಲೆಲ್ಲಾ ಒಂದೇ, ಕಾನೂನು ಎಲ್ಲರಿಗೂ ಒಂದೇ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಈಗಾಗಲೇ ಕೇಜಿಗಟ್ಟಲೇ ಸೋಡಿಯಂ ಉಪಯೋಗಿಸಿ ಬೇರೆಯವರೆಲ್ಲಾ ಸೈನ್ಸ್ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ. ಯಾರಾದ್ರು ಮೊಬೈಲ್ ಕೊಡಿ ಸರ್, ತೋರಿಸ್ತೀನಿ. CRAZY XYZ,MISTER INDIAN HACKER ಯೂಟ್ಯೂಬರ್ ಮಾಡಿದ್ದಾರೆ.
ನನ್ನ ಮೇಲೆ ತೆಗೆದುಕೊಂಡ ಕ್ರಮವೆಲ್ಲ ಅವರ ಮೇಲೆ ಯಾಕೆ ಆಗಿಲ್ಲ. ನಾನು ಮಾಡುವುದಕ್ಕಿಂತ ಮೊದಲೆ ಅವರೆಲ್ಲ ಮಾಡಿದ್ದಾರೆ. ಐಪಿಸಿ ಅಂದರೇ ಇಂಡಿಯಾ ಪೂರ್ತಿ ಒಂದೇ ಕಾನೂನು. ಅದು ಅರ್ಟಿಫಿಷಿಯಲ್ ಪಾಂಡ್. ಅವ್ರ ಮೇಲೆ ಏನು ಅಗದೇ ನನ್ನ ಮೇಲೆ ಮಾತ್ರ ಮಾಡ್ತಾರೆ ಅಂದ್ರೇ ಏನು ಅರ್ಥ. ಈ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಿದ್ದು, ನನಗೆ ನ್ಯಾಯ ಬೇಕೆ ಎಂದು ಆಗ್ರಹಿಸಿದರು.