Webdunia - Bharat's app for daily news and videos

Install App

ದಿ ವಿಲನ್’ ರಿಲೀಸ್ ದಿನವೇ ಚಿತ್ರದ ನಿರ್ದೇಶಕ ಪ್ರೇಮ್ ನರ್ತಕಿ ಚಿತ್ರಮಂದಿರ ಮಾಲೀಕರ ವಿರುದ್ಧ ಗರಂ ಆಗಿದ್ಯಾಕೆ?

Webdunia
ಗುರುವಾರ, 18 ಅಕ್ಟೋಬರ್ 2018 (14:39 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ ಬಹುನಿರೀಕ್ಷೆಯ ಚಿತ್ರ ‘ದಿ ವಿಲನ್ಇಂದು ಜಗತ್ತಿನಾದ್ಯಂತ ರಿಲೀಸ್ ಆಗಿದೆ. ಆದರೆ  ಈ ವೇಳೆ ಸಂಭ್ರಮದಿಂದಿರಬೇಕಾದ ಚಿತ್ರದ ನಿರ್ದೇಶಕ ಪ್ರೇಮ್ ನರ್ತಕಿ ಚಿತ್ರಮಂದಿರ ಮಾಲೀಕರ ವಿರುದ್ಧ ಕೋಪಗೊಂಡಿದ್ದಾರೆ.


‘ದಿ ವಿಲನ್’ ಸಿನಿಮಾ ನೋಡಲು ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳತ್ತ ಬಂದಿದ್ದಾರೆ. ನರ್ತಕಿ ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತಾದರೂ  ಚಿತ್ರದ ಆರಂಭದಲ್ಲಿಯೇ ಥಿಯೇಟರ್ ನಲ್ಲಿ ಸೌಂಡ್ ಸಮಸ್ಯೆ ಕಾಣಿಸಿಕೊಂಡಿತು. ಇದರಿಂದ ಚಿತ್ರ ವೀಕ್ಷಿಸಿಸಲು ಸಂತಸದಿಂದ ಬಂದ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಯಿತು. ಇದರಿಂದ ಕೋಪಗೊಂಡು ನಿರ್ದೇಶಕ ಪ್ರೇಮ್ ಚಿತ್ರಮಂದಿರದಿಂದ ಹೊರಬಂದಿದ್ದಾರೆ.


ನಂತರ ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು ನರ್ತಕಿ ಚಿತ್ರಮಂದಿರದ ಸೌಂಡ್ ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ‘ಪ್ರಪಂಚದ ದೊಡ್ಡ ದೊಡ್ಡ ಇಂಜಿನಿಯರ್ ಗಳ ಕರೆಸಿ ಸಾಂಗ್ ಮಾಡಿಸಿದ್ದೇನೆ. ಚಿತ್ರದ ಆರಂಭದಲ್ಲಿ ಸಿನಿಮಾ ನಿಲ್ಲಿಸೋಣ ಅಂದುಕೊಂಡಿದ್ದೆ, ಆದರೆ ಅಭಿಮಾನಿಗಳಿಗೆ ನಿರಾಸೆ ಆಗುತ್ತೆ ಅಂತಾ ನಿರ್ಧಾರ ಬದಲಿಸಿ ಹೊರಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ವರ್ಷನಾಗಟ್ಟುಲೇ ಸಿನಿಮಾ ಮಾಡಿದ್ದೀವಿ. ದಯವಿಟ್ಟು ಮೊಬೈಲಿನಲ್ಲಿ ಸೆರೆ ಹಿಡಿಯಬೇಡಿ ಎಂದು ಜನರಲ್ಲಿ ಪ್ರೇಮ್ ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೊಲೀಸರು ಅರೆಸ್ಟ್ ಮಾಡಲು ಕಾಯ್ತಿದ್ದರೆ ದರ್ಶನ್ ಎಲ್ಲಿದ್ದಾರೆ ನೋಡಿ

ಪವಿತ್ರಾ ಗೌಡ ಅರೆಸ್ಟ್ ಮಾಡಲು ಬಂದ ಪೊಲೀಸರು: ಟೈಂ ಕೇಳಿದ ಪವಿತ್ರಾ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ಪ್ರದೋಶ್‌ ಪಾತ್ರವೇನು ಗೊತ್ತಾ

ದರ್ಶನ್ ಬೇಲ್ ಕ್ಯಾನ್ಸಲ್: ನಟಿ ರಮ್ಯಾ ಫುಲ್ ಖುಷಿ

ಬೇಲ್ ಕ್ಯಾನ್ಸಲ್ ಆಗುವಾಗ ಪವಿತ್ರಾ ಗೌಡ ಮನೆಯಲ್ಲಿದ್ದರೆ, ದರ್ಶನ್ ಎಲ್ಲಿ ಹೋದ್ರು

ಮುಂದಿನ ಸುದ್ದಿ
Show comments