ಗಂಡ-ಹೆಂಡತಿ’ ಚಿತ್ರದ ನಿರ್ದೇಶಕ ರವಿ ಶ್ರೀವತ್ಸಾ ಮೇಲೆ ಕಿರುಕುಳದ ಆರೋಪ ಮಾಡಿದ ನಟಿ ಸಂಜನಾ

Webdunia
ಗುರುವಾರ, 18 ಅಕ್ಟೋಬರ್ 2018 (07:05 IST)
ಬೆಂಗಳೂರು : ಮೀಟೂ ಅಭಿಯಾನದಲ್ಲಿ ಇದೀಗ ಸ್ಯಾಂಡಲ್ ವುಡ್ ನಟಿ ಸಂಜನಾ ತಮ್ಮ ಮೊದಲ ಸಿನಿಮಾ ಜರ್ನಿಯಲ್ಲಿ ನಡೆದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.


ನಟಿ ಸಂಜನಾ ನಟಿಸಿದ ಗಂಡ-ಹೆಂಡತಿ’ ಚಿತ್ರದ ನಿರ್ದೇಶಕ ರವಿ ಶ್ರೀವತ್ಸಾ ಮೇಲೆ ಕಿರುಕುಳದ ಆರೋಪ ಮಾಡಿರುವ ನಟಿ ನಿರ್ದೇಶಕರು  ಶೂಟಿಂಗ್ ವೇಳೆ ಯಾವ ರೀತಿ ಅವರನ್ನು ಬಳಸಿಕೊಂಡರು ಎಂಬುದನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.


ನನ್ನನ್ನೂ ಚಿತ್ರರಂಗದಲ್ಲಿ ತುಂಬಾ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ನಿನ್ನ ವೃತ್ತಿ ಜೀವನ ಚೆನ್ನಾಗಿರಬೇಕು ಅಂದರೆ ಕಿಸ್ಸಿಂಗ್ ಸೀನ್ ಮಾಡು ಎಂದು ನಿರ್ದೇಶಕರು ಒತ್ತಾಯ ಮಾಡಿದ್ದರು. ಅಲ್ಲದೇ ಒಮ್ಮೆಲೇ 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಬ್ಯಾಕ್ ಲೆಸ್ ಸೀನ್ ಮಾಡುವಾಗಲು ಇಂತಹದ್ದೇ ಹಿಂಸೆಯಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇತ್ತು. ನನ್ನ ಮೇಲೆ ದಬ್ಬಾಳಿಕೆ ಮಾಡಿ ಕಿಸ್ಸಿಂಗ್ ಸೀನ್ ಗಳನ್ನು ಮಾಡಿಸಿಕೊಂಡರು ಎಂದು ಆರೋಪಿಸಿದ್ದಾರೆ.


ಹಾಗೇ ಕಿಸ್ಸಿಂಗ್ ಸೀನ್ ಗಳನ್ನು ಮಾಡದಿದ್ದರೆ ನೀನು ಸಾಯುವುದೇ ಲೇಸು ಎಂದು ಗದರಿದ್ದರು. ನಿನಗೆ ಬ್ರೇಕ್ ಸಿಕ್ಕರೆ ಮತ್ತೆ ನಮ್ಮತ್ತ ಬರಲ್ಲ, ಸಿನಿಮಾಗಾಗಿ ಎಲ್ಲವನ್ನೂ ಮಾಡಬೇಕು ಎಂದು ಹಿಂಸೆ ನೀಡಿದ್ದರು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಂಡಲೂರು ಮೃಗಲಾಯದಲ್ಲಿ ಶಿವಕಾರ್ತೀಕೇಯನ್ ದತ್ತು ಪಡೆದಿದ್ದ ಸಿಂಹ ಕೊನೆಗೂ ಪತ್ತೆ

ಸೋಮವಾರದ್ ಮೇಲ್ ನೋಡ್ರೀ, ಹೆಂಗ್ ಬಿದ್ದೋಗುತ್ತೆ ಅಂದೋರಿಗೆ: ದುನಿಯಾ ವಿಜಯ್‌ ಹೀಗಂದಿದ್ಯಾಕೆ

200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಮುಂದಿನ ಸುದ್ದಿ
Show comments