Publish Date: Tue, 06 Jun 2023 (08:10 IST)
Updated Date: Tue, 06 Jun 2023 (08:26 IST)
ಹೈದರಾಬಾದ್: ದಕ್ಷಿಣ ಭಾರತದ ಸಿನಿಮಾ ನಟರು ಈಗ ಬಾಲಿವುಡ್ ನಟರನ್ನೂ ಮೀರಿಸುವಂತೆ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಿದ್ದರೆ ದಕ್ಷಿಣ ಭಾರತದ ನಟರ ಪೈಕಿ ಶ್ರೀಮಂತ ನಟ ಯಾರು ಗೊತ್ತೇ?!
ದಳಪತಿ ವಿಜಯ್, ರಜನೀಕಾಂತ್, ಜ್ಯೂ.ಎನ್ ಟಿಆರ್, ಮಹೇಶ್ ಬಾಬು, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಬಹುತೇಕ ನಟರು ಕೋಟಿ ಕೋಟಿ ಸಂಭಾವನೆ ಪಡೆಯುವವರೇ.
ಆದರೆ ದಕ್ಷಿಣ ಭಾರತದ ಶ್ರೀಮಂತ ನಟ ಎಂದರೆ ಅಕ್ಕಿನೇನಿ ನಾಗಾರ್ಜುನ. ಸೂಪರ್ ಸ್ಟಾರ್ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪುತ್ರರಾಗಿರುವ ನಾಗಾರ್ಜುನ ತಾವೂ ನಟರಾಗಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಲ್ಲದೆ, ತಮ್ಮದೇ ಸ್ಟುಡಿಯೋ ಕೂಡಾ ಹೊಂದಿದ್ದಾರೆ. ಇವರ ಮಕ್ಕಳೂ ನಟರೇ.
ನಾಗಾರ್ಜುನ ಪ್ರತೀ ಜಾಹೀರಾತಿಗೆ 2 ಕೋಟಿ ಸಂಭಾವನೆ ಪಡೆಯುತ್ತಾರಂತೆ. ನಾಗಾರ್ಜುನ ಒಟ್ಟಾರೆ ಆಸ್ತಿಯೇ 3000 ಕೋಟಿ ರೂ.ಗೂ ಅಧಿಕ. ಅವರು ಪ್ರತೀ ಸಿನಿಮಾಗೆ 20 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ. ಇವರು ದಕ್ಷಿಣ ಭಾರತದ ನಟರ ಪೈಕಿಯೇ ಅತ್ಯಂತ ಶ್ರೀಮಂತ ಎಂಬ ಹಿರಿಮೆ ಹೊಂದಿದ್ದಾರೆ.