Webdunia - Bharat's app for daily news and videos

Install App

ಸ್ಥಳ ಮಹಜರು ವೇಳೆ ದರ್ಶನ್ ಸಪ್ಪೆ ಮುಖ, ಗಾಬರಿಯಲ್ಲೇ ಕುಳಿತಿದ್ದ ಚಿಕ್ಕಣ್ಣ

Sampriya
ಗುರುವಾರ, 5 ಸೆಪ್ಟಂಬರ್ 2024 (18:29 IST)
Photo Courtesy X
ಬೆಂಗಳೂರು: ನ್ಯಾಯಾಲಯಕ್ಕೆ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆಯಾಗುತ್ತಿದ್ದ ಹಾಗೇ ರೇಣುಕಾಸ್ವಾಮಿ ಹತ್ಯೆಯ ಕರಾಳತೆ ಒಂದೊಂದೆ ಬಯಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಮುಕ್ತಾಯಗೊಂಡಿದ್ದು, ಪ್ರಕರಣದ 3991 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆ ಮಾಡಿದ್ದಾರೆ. ಇದೀಗ ಪ್ರಕರಣ ಮತ್ತಷ್ಟು ಹೈಪ್‌ ಪಡೆದಿದ್ದು ಮಹತ್ವದ ಬೆಳವಣಿಗೆ ಜೊತೆಗೆ ಕೆಲವು ಫೋಟೋಗಳು ಸಹ ಬಹಿರಂಗಗೊಂಡಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುತ್ತಿರುವಾಗ ತೆಗೆದ ಫೋಟೋಗಳು ಇದೀಗ ರಿವೀಲ್ ಆಗಿದೆ. ಈ ಫೋಟೋದಲ್ಲಿ ರೇಣುಕಾಸ್ವಾಮಿ ಕೈ ಮುಗಿದು ಜೀವ ಭಿಕ್ಷೆ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು.  ಮತ್ತೊಂದು ಫೋಟೋದಲ್ಲಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿರುವ  ಫೋಟೋ.

ಇದೀಗ ಇನ್ನೊಂದು ಫೋಟೋದಲ್ಲಿ ಪೊಲೀಸರ ತಂಡ ಹಾಗೂ ಪ್ರಕರಣದ ಆರೋಪಿ ದರ್ಶನ್ ಹಾಗೂ ಸಾಕ್ಷಿಯಾಗಿರುವ ಚಿಕ್ಕಣ್ಣ ಸೇರಿದಂತೆ ಇತರ ಕೆಲ ಆರೋಪಿಗಳ ಜತೆಗೆ ಸ್ಟೋನಿ ಬ್ರೂಕ್‌ನಲ್ಲಿ ತನಿಖೆ ನಡೆಸುತ್ತಿರುವ ಫೋಟೋ ಹೊರಬಿದ್ದಿದೆ.

ಇದೀಗ ಈ ಫೋಟೋ ತನಿಖೆ ಸಲುವಾಗಿ ಕೊಲೆ ಪ್ರಕರಣದ ದರ್ಶನ್​ ಹಾಗೂ ಇತರ ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಸ್ಥಳ ಮಹಜರು ನಡೆಸಿದ್ದಾರೆ. ಇದೀಗ ಕೊಲೆಗೂ ಮುನ್ನ ದರ್ಶನ್‌ ಭೇಟಿ ನೀಡಿದ ಸ್ಟೋನಿ ಬ್ರೂಕ್ ಹೋಟೆಲ್​ನಲ್ಲಿ ಸ್ಥಳ ಮಹಜರು ನಡೆಸಿದ ಫೋಟೋವೊಂದು ವೈರಲ್‌ ಆಗಿದೆ. ನಟ ದರ್ಶನ್, ಆರೋಪಿಗಳಾದ ವಿನಯ್, ಪ್ರದೋಶ್ ಜೊತೆಗೆ ನಟ ಚಿಕ್ಕಣ್ಣ ಜೊತೆಗೆ ಸ್ಥಳ ಮಹಜರು ನಡೆಸಲಾಗಿದೆ.

ಪಟ್ಟಣಗೆರೆ ಶೆಡ್‌ಗೆ ಹೋಗುವ ಮುನ್ನ ದರ್ಶನ್ ಸೇರಿ ಇನ್ನೂ ಕೆಲವರು ಬೆಂಗಳೂರಿನ ಸ್ಟೋನಿ ಬ್ರೂಕ್ ಹೋಟೆಲ್​ನಲ್ಲಿ ಪಾರ್ಟಿ ನಡೆಸಿದ್ದಾರೆ. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು ಎನ್ನುವ ಮಾಹಿತಿ ಈ ಮೊದಲೇ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಚಿಕ್ಕಣ್ಣ ಎರಡು ಬಾರಿ ವಿಚಾರಣೆ ಎದುರಿಸಿದ್ದರು. ಆದರೆ ಸ್ಥಳ ಮಹಜರು ವೇಳೆ ಕೂಡ ಚಿಕ್ಕಣ್ಣ ಇದ್ದರು ಎನ್ನುವುದು ಇದೀಗ ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುಜರಾತ್‌ನಿಂದ ಎಮ್ಮೆ ಖರೀದಿಸಲು ಹೋಗಿ ಟೋಪಿ ಹಾಕಿಕೊಂಡ ನಿರ್ದೇಶಕ ಜೋಗಿ ಪ್ರೇಮ್

ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೂಲಿ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ಮುಂದಿನ ಸುದ್ದಿ
Show comments