Webdunia - Bharat's app for daily news and videos

Install App

ಮೊದಲ ದಿನ ಅಬ್ಬರಿಸಿ ನಂತರ ಮಂಕಾದ ಗೇಮ್‌ಚೇಂಜರ್‌: ₹400 ಕೋಟಿ ಚಿತ್ರದ ಕಥೆಯೇನು

Sampriya
ಮಂಗಳವಾರ, 14 ಜನವರಿ 2025 (18:22 IST)
Photo Courtesy X
ಹೈದರಾಬಾದ್‌: ಇದೇ 10ರಂದು ತೆರೆಗೆ ಬಂದ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಧೂಳೆಬ್ಬಿಸಿ ನಂತರ ತಗ್ಗಿದೆ.

ಎಸ್.ಶಂಕರ್ ನಿರ್ದೇಶನದ ಸಿನಿಮಾ ತನ್ನ ಮೊದಲ ದಿನದಂದು ಅದ್ಭುತ ಅಂಕಿ ಅಂಶಗಳೊಂದಿಗೆ ಬಾಕ್ಸ್​ ಆಫೀಸ್​ ಪ್ರಯಾಣ ಪ್ರಾರಂಭಿಸಿತು. ಆದ್ರೆ ಎರಡನೇ ದಿನದಿಂದಲೇ ಗಳಿಕೆ ಇಳಿಕೆ ಕಾಣಲು ಶುರುವಾಯಿತು.

ಮೊದಲ ದಿನ ಭಾರತದ ಬಾಕ್ಸ್​ ಆಫೀಸ್​ನಲ್ಲಿ 51 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದ ಪೊಲಿಟಿಕಲ್​​ ಥ್ರಿಲ್ಲರ್ ತನ್ನ 2ನೇ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಕುಸಿತ ಎದುರಿಸುತ್ತಿದೆ.

ಬಿಗ್​ ಬಜೆಟ್ ಮತ್ತು ಹಬ್ಬದ ಸಂದರ್ಭ ಬಿಡುಗಡೆಯಾಗಿರುವುದರ ಹೊರತಾಗಿಯೂ, ಗೇಮ್ ಚೇಂಜರ್ ಆರಂಭದ ಆ ಸ್ಪೀಡ್​​ ಕಾಯ್ದುಕೊಳ್ಳಲು ಹೆಣಗಾಡುತ್ತಿದೆ. ಮೊದಲ ವಾರಾಂತ್ಯ ಮತ್ತು ಮೊದಲ ಸೋಮವಾರದಂದು ಗಳಿಕೆಯಲ್ಲಿ ತೀವ್ರ ಇಳಿಕೆಯಾಗಿದ್ದು, ಸಿನಿಮಾ ತನ್ನ ಬಂಡವಾಳವನ್ನೂ ವಾಪಸ್​ ಪಡೆಯೋದು ಕಷ್ಟ ಎನ್ನುವಂತಿದೆ ಪರಿಸ್ಥಿತಿ.

ಚಿತ್ರದಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ, ಅಂಜಲಿ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ. ವರದಿಗಳ ಪ್ರಕಾರ, 400 ಕೋಟಿ ರೂಪಾಯಿ ಬಜೆಟ್​ನ ಚಿತ್ರವಿದು.

ಚಿತ್ರವು 2ನೇ ದಿನ 21.6 ಕೋಟಿ, ಮೂರನೇ ದಿನ 15.9 ಕೋಟಿ ರೂಪಾಯಿ ಗಳಿಸಿತ್ತು. ನಾಲ್ಕನೇ ದಿನ 8.50 ಕೋಟಿಗೆ ಕುಸಿದಿದೆ. ಸೋಮವಾರದ ವೇಳೆಗೆ, ಗೇಮ್ ಚೇಂಜರ್ ಭಾರತದಲ್ಲಿ 97 ಕೋಟಿ ರೂ. ಗಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments