Select Your Language

Notifications

webdunia
webdunia
webdunia
Sunday, 13 April 2025
webdunia

ಚಿತ್ರತಂಡದವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಲಹೆ ಏನು ಗೊತ್ತಾ?

ಸಂತೋಷ್ ಶೆಟ್ಟಿ
ಬೆಂಗಳೂರು , ಶುಕ್ರವಾರ, 1 ಜೂನ್ 2018 (06:37 IST)
ಬೆಂಗಳೂರು : ‘ಕನಸು’ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡಿರುವ ಯುವ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಅವರು ಪೋಟೋ ಶೂಟ್ ಮಾಡಲು ಎರ್ಮಾಯಿ ಫಾಲ್ಸ್ ಗೆ ತೆರಳಿ ನೀರು ಪಾಲಾಗಿ ಸಾವಿಗೀಡಾಗಿರುವುದರ ಬಗ್ಗೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾಪ ಸೂಚಿಸಿದ್ದು, ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಎಚ್ಚರದಿಂದಿರಿ ಎಂದು ಸಲಹೆ ನೀಡಿದೆ.


ಈ ಬಗ್ಗೆ ಮಾತನಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಸಾ.ರಾ ಗೋವಿಂದು ಅವರು,’ಸಂತೋಷ್ ಶೆಟ್ಟಿ ಅವರ ಘಟನೆ ಆಕಸ್ಮಿಕ. ಅವರು ಇನ್ನೂ ಯುವಕರಾಗಿದ್ದು, ಚಿತ್ರರಂಗದಲ್ಲಿ ಸಾಧನೆ ಮಾಡಬಹುದಾಗಿತ್ತು. ಆದರೆ ಅವರ ಕನಸು ಈಡೇರಲೇ ಇಲ್ಲ. ಚಿತ್ರರಂಗದ ಯಾರೇ ಆಗಲಿ, ಚಿತ್ರೀಕರಣಕ್ಕೆ ಹೋದಾಗ, ಅಥವಾ ಪೋಟೋ ಶೂಟ್ ನಡೆಸುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಾಮ್ ಚರಣ್ ತೇಜ ಅಭಿನಯದ ‘ರಂಗಸ್ಥಳಂ' ಚಿತ್ರಕ್ಕೆ ಎದುರಾಗಿದೆ ಸಂಕಷ್ಟ