Select Your Language

Notifications

webdunia
webdunia
webdunia
webdunia

ಶಿವಣ್ಣನ ಅಭಿಮಾನಿಗಳಿಗೆ ಸುದೀಪ್ ಹೇಳಿದ್ದೇನು?

ಶಿವಣ್ಣನ ಅಭಿಮಾನಿಗಳಿಗೆ ಸುದೀಪ್ ಹೇಳಿದ್ದೇನು?
ಬೆಂಗಳೂರು , ಶನಿವಾರ, 20 ಅಕ್ಟೋಬರ್ 2018 (07:03 IST)
ಬೆಂಗಳೂರು : ಗುರುವಾರದಂದು ಬಿಡುಗಡೆಗೊಂಡ 'ದಿ ವಿಲನ್' ಚಿತ್ರಕ್ಕೆ ಇದೀಗ ಸಂಕಟವೊಂದು ಎದುರಾಗಿದೆ. ಚಿತ್ರದ ನಿರ್ದೇಶಕ ಪ್ರೇಮ್ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹೌದು. ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ನಟಿಸಿದ ‘ದಿ ವಿಲನ್’ ಚಿತ್ರದಲ್ಲಿ ಶಿವಣ್ಣ ಪಾತ್ರ ಗೆಸ್ಟ್ ರೋಲ್ ನಂತಿದೆ. ನೂರಕ್ಕೂ ಹೆಚ್ಚು ಸಿನಿಮಾ ಮಾಡಿರುವ ನಟನಿಗೆ ಈ ರೀತಿಯ ಪಾತ್ರ ನೀಡಿರುವುದು ಸರಿಯಲ್ಲ. ಶಿವಣ್ಣನ ಒಳ್ಳೆಯತನವನ್ನು ಪ್ರೇಮ್ ಮಿಸ್ ಯೂಸ್ ಮಾಡಿದ್ದಾರೆ. ಅಲ್ಲದೇ ಚಿತ್ರದಲ್ಲಿ ಕಿಚ್ಚ ಸುದೀಪ್, ಶಿವಣ್ಣಗೆ ಕಾಲಿನಿಂದ ಹೊಡೆಯುವ ದೃಶ್ಯವಿದ್ದು, ಈ ದೃಶ್ಯವನ್ನು ಚಿತ್ರದಿಂದ ತೆಗೆದು ಹಾಕುವಂತೆ ಒತ್ತಾಯಿಸಿ ಶಿವರಾಜ್ ಕುಮಾರ್ ಅಭಿಮಾನಿಗಳು ನರ್ತಕಿ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್ ಅವರು, ಶಿವಣ್ಣ ದಡ್ಡನಾ....?? ಈ ಸಿನಿಮಾ ಕತೆ ಕೇಳಿಯೇ ಶಿವಣ್ಣ ಒಪ್ಪಿಕೊಂಡಿರುವುದು. ಶಿವಣ್ಣ 35, 40 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ. ಶಿವಣ್ಣ ಪ್ರೇಮ್ ಗೆ ಹೇಳಿ ಬೇಕಾದರೆ ಸೀನ್ ಕಟ್ ಮಾಡಿಸಲಿ. ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರತ್ತೆ. ತಾಯಿಗೆ ಪ್ರಾಮಿಸ್ ಮಾಡಿರ್ತಾರೆ, ಹಾಗಾಗಿ ಶಿವಣ್ಣ ಕೈ ಎತ್ತೋದಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿ ವಿಲನ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?