Webdunia - Bharat's app for daily news and videos

Install App

ಶೃತಿ ಹರಿಹರನ್ ಮಾಡಿದ ಆರೋಪಕ್ಕೆ ನಟ ಅರ್ಜುನ್ ಸರ್ಜಾ ಹೇಳಿದ್ದೇನು?

Webdunia
ಭಾನುವಾರ, 21 ಅಕ್ಟೋಬರ್ 2018 (08:19 IST)
ಬೆಂಗಳೂರು : ಮೀಟೂ ಅಭಿಯಾನದಲ್ಲಿ ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಬಗ್ಗೆ ಇದೀಗ ನಟ ಅರ್ಜುನ್ ಸರ್ಜಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.


ಮಾಧ್ಯಮದೊಂದಿಗೆ ಮಾತನಾಡಿದ ನಟ ಅರ್ಜುನ್ ಸರ್ಜಾ ಅವರು,’ ಶೃತಿ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಇದೂವರೆಗೂ ನಾನು 60 ರಿಂದ 70 ನಟಿಯರ ಜೊತೆ ನಟಿಸಿದ್ದೇನೆ. ಯಾರೂ ಸಹ ಈ ರೀತಿಯ ಆರೋಪ ಮಾಡಿಲ್ಲ.


ಜೊತೆಯಲ್ಲಿಯೂ ಕೂರಿಸಿಕೊಂಡು ದೃಶ್ಯದಲ್ಲಿ ಹೇಗೆ ನಟಿಸಬೇಕು? ಡೈಲಾಗ್ ನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ನಮ್ಮ ವೃತ್ತಿಯನ್ನು ಮುಂದಿಟ್ಟುಕೊಂಡು ಇಂತಹ ಕೆಳಮಟ್ಟದಲ್ಲಿ ನಾನು ಎಂದೂ ಇಳಿದಿಲ್ಲ. ನಮ್ಮ ಪ್ರೊಫೆಶನ್ ಮುಂದೆ ಇಟ್ಟುಕೊಂಡು ಒಂದು ಹೆಣ್ಣಿನ ಮೈ ಮುಟ್ಟಬೇಕು ಎಂಬ ಚೀಪ್ ಮೆಂಟಾಲಿಟಿ ನನ್ನಲ್ಲಿ ಇಲ್ಲ. ನಾನು ಮೀಟೂ ವೇದಿಕೆ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ಈ ದೊಡ್ಡ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶೃತಿ ಮಾತನಾಡುವ ಮಾತುಗಳಿಗೆ ಯಾವುದಾದರೂ ಆಧಾರವಿದೆಯಾ? ಶೃತಿ ಆರೋಪದ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದು ಹೇಳಿದ್ದಾರೆ.


ಅಲ್ಲದೇ ನಾನು ಪ್ರತಿಕ್ರಿಯಿಸಬಾರದು ಅಂತಾ ನಿರ್ಧರಿಸಿದ್ದೆ. ಆದ್ರೆ ‘ಮೌನಂ ಸಮ್ಮತಿ ಲಕ್ಷ್ಮಣಂ’ ಎಂದು ಅರ್ಥವಾಗುತ್ತದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆ ನಡೆದ ಸಿನಿಮಾ ಮುಗಿದಿದೆ. ಅಂದೇ ನಿರ್ದೇಶಕರಿಗೆ ಅಥವಾ ಚಲನಚಿತ್ರ ಮಂಡಳಿಗೆ ದೂರು ಕೊಡಬೇಕಿತ್ತು. ಇಷ್ಟು ದಿನ ಸುಮ್ಮನಿದ್ದು ಈವಾಗ ಯಾಕೆ ಹೇಳುತ್ತಿದ್ದಾರೆಂದು ಗೊತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ