Select Your Language

Notifications

webdunia
webdunia
webdunia
webdunia

ಮಾಸ್ತಿ ಗುಡಿ ಚಿತ್ರದ ಸಹ ನಿರ್ಮಾಪಕನಿಗೆ ನ್ಯಾಯಾಲಯ ವಿಧಿಸಿದ ಷರತ್ತುಗಳೇನು?

ಮಾಸ್ತಿ ಗುಡಿ ದುರಂತ
Bangalore , ಗುರುವಾರ, 1 ಡಿಸೆಂಬರ್ 2016 (07:49 IST)
ಬೆಂಗಳೂರು: ಮಾಸ್ತಿ ಗುಡಿ ದುರಂತಕ್ಕೆ ಕಾರಣವಾದ ಹಿನ್ನಲೆಯಲ್ಲಿ ಬಂಧಿತರಾದವರಲ್ಲಿ ಸಹ ನಿರ್ಮಾಪಕ ಸಿದ್ದು ಕೂಡಾ ಸೇರಿದ್ದಾರೆ. ಐವರು ಆರೋಪಿಗಳಲ್ಲಿ ಅವರಿಗೆ ಮಾತ್ರ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ಆ ಷರತ್ತುಗಳೇನು?

1 ಲಕ್ಷ ರೂ. ಶ್ಯೂರಿಟಿ ಬಾಂಡ್ ಕೊಡಬೇಕು. ಪ್ರತಿ ಶನಿವಾರ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕು. ಮಾಹಿತಿ ಇಲ್ಲದೆ ಹೊರಗಡೆ ಪ್ರಯಾಣ ಮಾಡುವಂತಿಲ್ಲ. ಈ ಷರತ್ತಿನ ಅನ್ವಯ ಸಿದ್ದು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.

ಆದರೆ ಸಾಹಸ ನಿರ್ದೇಶಕ ರವಿ ವರ್ಮಾ, ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್, ಮ್ಯಾನೇಜರ್ ಭರತ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಇವರೂ ಬಿಡುಗಡೆಯಾಗುವರು ಎಂಬ ನಿರೀಕ್ಷೆಯಲ್ಲಿ ನ್ಯಾಯಾಲಯದ ಹೊರಗೆ ನಟ ದುನಿಯಾ ವಿಜಿ ಬಂದು ನಿಂತಿದ್ದೇ ಬಂತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅರುಣ್ ಸಾಗರ್ ’ಕಲಾ’ ನಿರ್ದೇಶನದಲ್ಲಿ ಯಶ್-ರಾಧಿಕಾ ಸಪ್ತಪದಿ