Select Your Language

Notifications

webdunia
webdunia
webdunia
webdunia

ನಾವಿಬ್ಬರು ಗೋಲ್ ಮಾಲ್ ಬ್ರದರ್ಸ್ ಅಂತಿದ್ದಾರೆ ಚಿಕ್ಕಣ್ಣ ಹಾಗೂ ಸೃಜನ್

ನಾವಿಬ್ಬರು ಗೋಲ್ ಮಾಲ್ ಬ್ರದರ್ಸ್ ಅಂತಿದ್ದಾರೆ ಚಿಕ್ಕಣ್ಣ ಹಾಗೂ ಸೃಜನ್
, ಶುಕ್ರವಾರ, 1 ಜುಲೈ 2016 (09:12 IST)
ಮಜಾ ಟಾಕೀಸ್ ಕಾರ್ಯಕರ್ಮದಲ್ಲಿ ಚಿಕ್ಕಣ್ಣ ಹಾಗೂ ಸೃಜನ್ ಲೊಕೇಶ್ ಅವರ ಜುಗಲ್ ಬಂದಿ ನೋಡಿದ ಅಭಿಮಾನಿಗಳು ಇವರಿಬ್ಬರು ಒಂದೇ ಸಿನಿಮಾದಲ್ಲಿ ಇದೇ ರೀತಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತಾ ಲೆಕ್ಕಾಚಾರ ಹಾಕಿದ್ರು. ಆದ್ರೆ ಅಭಿಮಾನಿಗಳ ಈ ಹಾರೈಕೆ ಈಗ ನಿಜವಾಗುತ್ತಿದೆ.

ಹೌದು... ಕನ್ನಡದಲ್ಲಿ ಸೃಜನ್ ಲೊಕೇಶ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಬರುತ್ತಿದೆ.ಮೊನ್ನೆ ಅಂದ್ರೆ ಜೂನ್‌ 28 ಅಂದರೆ ಸೃಜನ್‌ ಹುಟ್ಟುಹಬ್ಬದಂದು ಚಿಕ್ಕಣ್ಣ ಹಾಗೂ ಸೃಜನ್ ಲೊಕೇಶ್ ಅಭಿನಯಿಸುತ್ತಿರುವ ಗೋಲ್ ಮಾಲ್ ಬರ್ದರ್ಸ್ ಸಿನಿಮಾ ಸೆಟ್ಟೇರಿತು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಕುಚುಕು ಗೆಳೆಯನ ಸಿನಿಮಾಕ್ಕೆ ಕ್ಲ್ಯಾಪ್ ಹಾಕುವ ಮೂಲಕ ಶುಭ ಹಾರೈಸಿದ್ರು.. ದೇವರಾಜ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿಬರ್ತಿರೋ ಈ ಚಿತ್ರದಲ್ಲಿ ಚಿಕ್ಕಣ್ಣ ಒಂದು ವಿಭಿನ್ನ ಗೆಟಪ್‌ನಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿಕ್ಕಣ್ಣ  ಮುಹೂರ್ತ ಸಮಾರಂಭ ಚಿಕ್ಕಣ್ಣ ಸೂಟ್ ಧರಿಸಿ ಮಿಂಚುತ್ತಿದ್ದರು. 
 
ಅಂದ್ಹಾಗೆ ಈ ಸಿನಿಮಾದಲ್ಲಿ ಸೃಜನ್‌ ಹಾಗೂ ಚಿಕ್ಕಣ್ಣ ಜೊತೆ ರೂಪೇಶ್‌ ಅನ್ನೋ ನವಪ್ರತಿಭೆ ಕೂಡ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂವರು ಹೀರೋಗಳಿಗೆ ನಾಯಕಿಯರಾಗಿ ನಿಖಿತಾ ನಾರಾಯಣ್‌, ಚಿರಶ್ರೀ ಮತ್ತು ಪವಿತ್ರ ಕಾಣಿಸಿಕೊಳ್ಳಲಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೀಡರ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾದ ಪ್ರಣೀತಾ