Select Your Language

Notifications

webdunia
webdunia
webdunia
webdunia

ಲೀಡರ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾದ ಪ್ರಣೀತಾ

ಲೀಡರ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾದ ಪ್ರಣೀತಾ
, ಶುಕ್ರವಾರ, 1 ಜುಲೈ 2016 (09:09 IST)
ಸ್ಯಾಂಡಲ್ ವುಡ್ ಅಂಗಳದಲ್ಲಿ ಚಿರಪರಿಚಿತ ಹೆಸರು ಅದ್ರೆ ಅದು ಪ್ರಣೀತಾ ಸುಭಾಷ್. ಸ್ಯಾಂಡಲ್ ವುಡ್ ನಲ್ಲಿ ತನ್ನ ಮೊದಲ ಸಿನಿಮಾದ ಮೂಲಕವೇ ಗಮನ ಸೆಳೆದ ಪ್ರಣೀತಾ ಅವರು ಆ ಬಳಿಕ ಸದ್ದಿಲ್ಲದೇ ಪರಭಾಷೆಯಲ್ಲೂ ಸದ್ದು ಮಾಡೋದಕ್ಕೆ ತೊಡಗಿದ್ರು, ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ದೊಡ್ಡ ದೊಡ್ಡ ನಟರೊಂದಿಗೆ ಅಭಿನಯಿಸಿದ್ದಾರೆ ಪ್ರಣೀತಾ.

ಇದೇ ಪ್ರಣೀತಾ ಅವರು ಇದೀಗ ಮತ್ತೆ ಕನ್ನಡಕ್ಕೆ ವಾಪಸ್ಸಾಗಿದ್ದಾರೆ.ಅಂದ್ಹಾಗೆ ಈ ಪ್ರಣೀತಾ ಅವರು ಅಭಿನಯಿಸುತ್ತಿರುವ ಸಿನಿಮಾ ಅಂದ್ರೆ ಲೀಡರ್ . ಶಿವರಾಜ್ ಕುಮಾರ್ ಅವರು ನಾಯಕನಾಗಿ ಅಭಿನಯಿಸುತ್ತಿರುವ ಲೀಡರ್ ಸಿನಿಮಾದಲ್ಲಿ ಪ್ರಣೀತಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಸಿನಿಮಾದಲ್ಲಿ ಪ್ರಣೀತಾ ಅವರು ಶಿವರಾಜ್ ಕುಮಾರ್ ಅವರ ಪತ್ನಿಯಾಗಿ 
ಕಾಣಿಸಿಕೊಳ್ಳುತ್ತಿದ್ದಾರೆ.ಅಲ್ಲದೇ ನನ್ನದು ಸಿನಿಮಾದಲ್ಲಿ ತುಂಬಾನೇ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಅಂತಾ ಪ್ರಣೀತಾ ಅವರು ಹೇಳಿದ್ದಾರೆ.ಅಲ್ಲದೇ ಇದುವೆರೆಗೂ ತಾನು ನಿರ್ವಹಿಸದೇ ಇರುವಂತಹ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದೇನೆ ಅಂತಾ ಅವರು ಹೇಳಿದ್ದಾರೆ.
 
ಇನ್ನು ಶಿವರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ಅಭಿನಯಿಸುತ್ತಾ ಇರೋದರಿಂದ ನಾನು ಸಾಕಷ್ಟು ಹೆದರಿದ್ದೇನೆ ಅಂತಾ ಅವರು ಹೇಳಿದ್ದಾರೆ.ಅವರೊಬ್ಬ ಅದ್ಭುತ ನಟ. ಅವರ ಎನರ್ಜಿ ನಿಜಕ್ಕೂ ಗ್ರೇಟ್ ಅಂದಿದ್ದಾರೆ. ಈ ಸಿನಿಮಾವನ್ನು ರೋಸ್ ಸಿನಿಮಾ ಖ್ಯಾತಿಯ ಸಹನಾ ಮೂರ್ತಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪ್ರಣೀತಾ ಸಿನಿಮಾ ಯಾವಾಗ ಆರಂಭವಾಗುತ್ತೆ ಅಂತಾ ಕಾಯುತ್ತಿದ್ದಾರಂತೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಗರ್ ಥಂಡ್ ಸಿನಿಮಾ ತಂಡದಿಂದ ರೋಡ್ ಟ್ರಿಪ್