Publish Date: Mon, 08 Jun 2026 (11:39 IST)
Updated Date: Mon, 08 Jun 2026 (11:46 IST)
ಕೊಚ್ಚಿ: ಮಲಯಾಳಂ ಖ್ಯಾತ ನಟ ಸಲೀಂ ಕುಮಾರ್ ನಿನ್ನೆ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಫ್ಯಾನ್ಸ್ ಅತಿರೇಕದ ವರ್ತನೆ ತೋರಿದ್ದು, ಅವರ ಪುತ್ರ ತಾಳ್ಮೆ ಕಳೆದುಕೊಂಡು ಕಿರುಚಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾವು ಭಾರತೀಯರು ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತೀಯರು ಸಿನಿಮಾ ನಟರನ್ನು ನಮ್ಮ ಮನೆಯವರಂತೇ ಕಾಣುತ್ತೇವೆ. ಅಷ್ಟೊಂದು ಆರಾಧಿಸುತ್ತೇವೆ. ಆದರೆ ಈ ಅಭಿಮಾನ ಅವರ ಕುಟುಂಬದವರಿಗೆ ಉಸಿರು ಕಟ್ಟಿಸಬಾರದಲ್ವೇ?
ಇಲ್ಲಿ ನಡೆದಿದ್ದೂ ಇದೆ. ಮಲಯಾಳಂನ ಜನಪ್ರಿಯ ನಟ ಸಲೀಂ ಕುಮಾರ್ ತಮ್ಮ 56 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರ ಅಂತಿಮ ಸಂಸ್ಕಾರದ ವೇಳೆ ಮನೆಯ ಹೊರಗೆ ಮೃತದೇಹವಿರಿಸಿ ಕುಟುಂಬಸ್ಥರು ತಮ್ಮ ಕರ್ತವ್ಯ ಮಾಡುತ್ತಿದ್ದರೆ ಸಾಕಷ್ಟು ಜನ ಅಲ್ಲಿ ನೆರೆದಿದ್ದರು.
ಅಲ್ಲಿದ್ದ ಅಭಿಮಾನಿಗಳು ನೂಕು ನುಗ್ಗಲು ನಡೆಸಿ ಕುಟುಂಬದವರಿಗೇ ನಿಲ್ಲಲೂ ಆಗದಂತೆ ಮಾಡಿಬಿಟ್ಟಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಅವರ ಪುತ್ರ ಚಂದು ಕುಮಾರ್ ಅಭಿಮಾನಿಗಳತ್ತ ಅಳುತ್ತಲೇ ದೂರ ಸರಿಯಿರಿ ಎಂದು ಕಿರುಚಾಡಿದ್ದಾರೆ. ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಓರ್ವ ಸಿನಿಮಾ ನಟ ಎಂದರೆ ಪಬ್ಲಿಕ್ ಪ್ರಪಾರ್ಟಿಯಲ್ಲ. ಆತನಿಗೂ ಒಂದು ಕುಟುಂಬವಿರುತ್ತದೆ. ಆತನ ಕುಟುಂಬದವರಿಗೂ ದುಃಖವಿರುತ್ತದೆ. ಆತನನ್ನು ಶಾಂತಿಯುತವಾಗಿ ಕಳುಹಿಸಿಕೊಡಬೇಕೆಂದು ಇರುತ್ತದೆ. ಸಾವಿನ ಸಂದರ್ಭದಲ್ಲಾದರೂ ಇದಕ್ಕೆ ಅವಕಾಶ ಮಾಡಿಕೊಡಬೇಡವೇ? ಆತನ ಕುಟುಂಬದವರಿಗೆ ಅಷ್ಟಾದರೂ ನೆಮ್ಮದಿ ಕೊಡಬಾರದೇ ಎಂದು ಹಲವರು ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ