Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಹಳ್ಳಿ ಹಿನ್ನೆಲೆಯಲ್ಲಿ `ಸಿಂಗ’ನ ಸಾಹಸ!

webdunia
ಮಂಗಳವಾರ, 9 ಜುಲೈ 2019 (14:00 IST)
ಈಗ ಎತ್ತ ನೋಡಿದರೂ ಸಿಂಗನದ್ದೇ ಸದ್ದು. ಟ್ರೈಲರ್ ಮತ್ತು ಹಾಡಿನ ಮೂಲಕ ಭಾರೀ ಕ್ರೇಜ್ ಹುಟ್ಟು ಹಾಕಿರೋ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಇದೇ ಹತ್ತೊಂಬತ್ತರಂದು ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಇದು ಚಿರು ಸಿನಿ ಯಾನದಲ್ಲಿಯೇ ಮಹತ್ವ ದ ಚಿತ್ರವಾಗಿ ದಾಖಲಾಗುತ್ತಲೇ ದೊಡ್ಡ ಗೆಲುವನ್ನು ತನ್ನದಾಗಿಸಿಕೊಳ್ಳುವ ಶುಭ ಸೂಚನೆಗಳೇ ಎಲ್ಲೆಡೆ ಕಾಣಿಸುತ್ತಿದೆ. ಸಿಂಗ ಇಂಥಾದ್ದೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದೇ ತನ್ನ ಮಾಸ್ ಲುಕ್ಕಿನಿಂದ!
ಈ ಹಿಂದೆ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸಿದ್ದ ರಾಮ್ ಲೀಲಾ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದವರು ವಿಜಯ್ ಕಿರಣ್. ಆ ಹಂತದಲ್ಲಿಯೇ ಚಿರು ಅವರ ನಟನೆಯ ತಾಕತ್ತೇನನ್ನೋದು ಅವರಿಗೆ ಅರಿವಾಗಿತ್ತಂತೆ. ರಾಮ್ ಲೀಲಾ ತೆರೆ ಕಂಡ ಕ್ಷಣದಲ್ಲಿಯೇ ವಿಜಯ್ ಚಿರುಗಾಗಿ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡೋ ನಿರ್ಧಾರಕ್ಕೆ ಬಂದಿದ್ದರಂತೆ. ಆ ಬಳಿಕ ವರ್ಷಾಂತರಗಳ ಕಾಲ ಕಥಾ ಎಳೆಯೊಂದನ್ನು ವಿಸ್ತರಿಸಿ ದೃಷ್ಯ ರೂಪ ನೀಡಿರೋ ಚಿತ್ರ ಸಿಂಗ.
webdunia
ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಎಂಥವರೂ ಅಚ್ಚರಿಗೀಡಾಗುವಂಥಾ ಸಾಹಸ ಸನ್ನಿವೇಶಗಳಲ್ಲಿ ನಟಿಸಿದ್ದಾರೆ. ರವಿವರ್ಮಾ ಮತ್ತು ಪಳನಿರಾಜು ಈ ಸಾಹಸ ಸನ್ನಿವೇಶಗಳನ್ನು ಕಟ್ಟಿ ಕೊಟ್ಟಿದ್ದಾರೆ. ಈ ಇಬ್ಬರು ಸಾಹಸ ನಿರ್ದೇಶಕರು ತಿಂಗಳುಗಟ್ಟಲೆ ಶ್ರಮವಹಿಸಿ ಸಿಂಗನನ್ನು ಮಾಸ್ ಲುಕ್ಕಿನಲ್ಲಿಯೂ ಶೃಂಗರಿಸಿದ್ದಾರೆ. ಈ ಮೂಲಕವೇ ಚಿರು ಈವರೆಗಿನ ಸಿನಿಮಾ ಯಾನಕ್ಕಿಂತಲೂ ಭಿನ್ನವಾಗಿ ಅಭಿಮಾನಿಗಳ ಮುಂದೆ ಬರೋ ಕಾತರದಿಂದಿದ್ದಾರೆ. ಪಕ್ಕಾ ಹಳ್ಳಿ ಫ್ಲೇವರಿನ ಸಿಂಗನ ಆಕ್ಷನ್ ಕಮಾಲ್ ಇದೇ ತಿಂಗಳ ಹತ್ತೊಂಬತ್ತರಂದು ಜಾಹೀರಾಗಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಸಿಂಗ: ಫ್ಯಾಮಿಲಿ ಪ್ರೇಕ್ಷಕರಿಗೂ ಫುಲ್ ಮೀಲ್ಸ್ ಗ್ಯಾರೆಂಟಿ!