Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಟಿ ಸಾವಿನ ಪ್ರಕರಣದಲ್ಲಿ ನಟ ವಿಕ್ರಮ್ ಚಟರ್ಜಿ ಬಂಧನ

webdunia
ಶುಕ್ರವಾರ, 7 ಜುಲೈ 2017 (10:55 IST)
ಬೆಂಗಾಲಿಯ ಮಾಡೆಲ್ ಕಮ್ ಟಿವಿ ನಿರೂಪಕಿ ಸೋನಿಕಾ ಚೌಹಾಣ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ಚಟರ್ಜಿ ಅವರನ್ನ ಗುರುವಾರ ಬಂಧಿಸಲಾಗಿದೆ. ಕೋಲ್ಕತ್ತಾದ ಮಾಲ್ ಬಳಿ ನಟನನ್ನ ಬಂಧಿಸಲಾಗಿದೆ.
 

ಕಳೆದ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ನಟ ವಿಕ್ರಮ್ ಚಟರ್ಜಿ ರೇಡಿಯೋ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಮಾಹಿತಿ ಆಧರಿಸಿ ನಮ್ಮ ಸಿಬ್ಬಂದಿ ಮಾಹಿತಿ ರವಾನಿಸಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ನಟನನ್ನ ಅಲಿಪೋರ್ ಕೋರ್ಟ್`ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಏಪ್ರಿಲ್`ನಲ್ಲಿ ವಿಕ್ರಮ್ ಚಟರ್ಜಿ ಜೊತೆ ಮಾಡೆಲ್ ಕಮ್ ನಿರೂಪಕಿ ಸೋನಿಕಾ ಚೌಹಾಣ್ ಜೊತೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ಸಂದರ್ಭ ನಟಿ ಸಾವಿಗೀಡಾಗಿದ್ದರು. ಘಟನೆ ಕೋಲ್ಕತ್ತಾದಲ್ಲಿ ಗಲಭೆಗೆ ಕಾರಣವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯಪಾನ ಮಾಡಿ ಕಾರು ಚಲಾಯಿಸಿ ನಟಿಯ ಸಾವಿಗೆ ಕಾರಣವಾದ ಆರೋಪದಡಿ ಐಪಿಸಿ ಸೆಕ್ಷನ್ 304 ರಡಿ ನಟ ವಿಕ್ರಮ್ ಚಟರ್ಜಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬುರ್ಖಾ ಹಾಕಿ ತಲೆಮರೆಸಿಕೊಂಡು ಬಂದ ರಾಖಿ ಸಾವಂತ್!