Webdunia - Bharat's app for daily news and videos

Install App

ವಿಜಯಲಕ್ಷ್ಮಿ ದರ್ಶನ್‌ ಹುಟ್ಟುಹಬ್ಬ: ಸ್ಟ್ರಾಂಗ್‌ ಲೇಡಿ ಎಂದು ಶುಭಕೋರಿದ ನಟಿ ಕಾವ್ಯ ಗೌಡ

Vijayalakshmi Darshan Birthday  Actress Kavya Gowda  Darshan Thoogudeep
Sampriya
ಸೋಮವಾರ, 11 ನವೆಂಬರ್ 2024 (15:29 IST)
Photo Courtesy X
ಬೆಂಗಳೂರು: ವಿಜಯಲಕ್ಷ್ಮಿ ದರ್ಶನ್‌ ಹುಟ್ಟುಹಬ್ಬ ಹಿನ್ನೆಲೆ ಅವರಿಗೆ ಸ್ನೇಹಿತರು ಶುಭಕೋರಿದ್ದಾರೆ. ಸ್ನೇಹಿತೆಯಾಗಿರುವ ನಟಿ ಕಾವ್ಯಗೌಡ ಅವರು ತನ್ನ ಅಕ್ಕನ ಸ್ಥಾನದಲ್ಲಿರುವ ವಿಜಯಲಕ್ಷ್ಮಿಗೆ ಪ್ರೀತಿಯಿಂದ ಶುಭ ಹಾರೈಸಿದ್ದಾರೆ.  

ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಕಾವ್ಯ ಅವರು ತನ್ನ ಮಗಳ ಜತೆ ವಿಜಯಲಕ್ಷ್ಮಿ ಸಮಯ ಕಳೆಯುತ್ತಿರುವುದನ್ನು ಹಾಗೂ ತನ್ನೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಹ್ಯಾಪಿ ಬರ್ತಡೇ ನನ್ನ ಬ್ಯುಟಿಫುಲ್ ಅಕ್ಕ. ಯಾವಾಗಲೂ ನೆಮ್ಮದಿ ಹಾಗೂ ಆರೋಗ್ಯದಿಂದ ಖುಷಿಯಾಗಿರಿ.ಯಾವಾಗಲೂ ಪ್ರಜ್ವಲಿಸುತ್ತಿರಿ. ಸ್ಟ್ರಾಂಗ್‌ ಲೇಡಿ. ಲವ್‌ ಯೂ ಅಕ್ಕ ಎಂದು ಕಾವ್ಯಾ ಗೌಡ ಅವರು ಬರೆದುಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮುಖಾಂತರ ಹೊರ ಬಂದಿರುವ ನಟ ದರ್ಶನ್‌ರನ್ನು ಹೊರತರಲು ಕಾನೂನು ಹೋರಾಟದ ಜತೆಗೆ ದೇವರ ಮೊರೆಹೋಗುತ್ತಿದ್ದ ವಿಜಯಲಕ್ಷ್ಮಿ ನಡೆಗೆ ದರ್ಶನ್ ಫ್ಯಾನ್‌, ಜನ ಸಾಮಾನ್ಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಭಾರತ ಸಂಸ್ಕೃತಿಯ ಹೆಣ್ಣು ಮಗಳೆಂದರೆ ಅದು ವಿಜಯಲಕ್ಷ್ಮಿ. ಇನ್ನು ಅತ್ತಿಗೆ ದೇವತೆಯಂತವಳು ಎಂದು ದರ್ಶನ್ ಫ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡುತ್ತಿದ್ದಾರೆ.

ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರುತ್ತಿದ್ದ ಹಾಗೇ ವಿಜಯಲಕ್ಷ್ಮಿ ಪ್ರತಿ ಸೋಮವಾರ ಪತಿಗೆ ಬೇಕಾದ ವಸ್ತುಗಳೊಂದಿಗೆ ಜೈಲಿಗೇ ಭೇಟಿ ನೀಡಿ, ದರ್ಶನ್‌ಗೆ ದೈರ್ಯ ತುಂಬುತ್ತಿದ್ದರು. ಅದಲ್ಲದೆ ಈ ಪ್ರಕರಣದಿಂದ ದರ್ಶನ್‌ರನ್ನು ಹೊರ ತರಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ದರ್ಶನ್‌ಗೆ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆ ಪಡೆಯುತ್ತಿದ್ದ ಹಾಗೇ ಸ್ವತಃ ತಾನೇ ಕರೆದುಕೊಂಡು ಬರಲು ಹೋಗಿದ್ದರು. ಇದೀಗ ಬೆನ್ನು ನೋವು ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ರನ್ನು ನೋಡಿಕೊಳ್ಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments