ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೇ ಜೈಲು ಸೇರಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಇಂದು ಪರಪ್ಪನಾ ಅಗ್ರಹಾರಕ್ಕೆ ಬಂದಿದ್ದಾರೆ.
ಸಪ್ಪೆ ಮುಖದಲ್ಲೇ ಗಂಡನನ್ನು ನೋಡಲು ಬಂದ ವಿಜಯಲಕ್ಷ್ಮಿ, ಎರಡು ಬ್ಯಾಗ್‌ನಲ್ಲಿ ತಿಂಡಿ ಹಾಗೂ ಬಟ್ಟೆಯನ್ನು ತಂದಿದ್ದಾರೆ.
ಇನ್ನೂ ಸೋಮವಾರ ಜೈಲಿನಲ್ಲಿ ತಮ್ಮವರನ್ನು ಭೇಟಿಯಾಗಲು ಅವಕಾಶವಿದ್ದು, ಇಂದು ವಿಜಯಲಕ್ಷ್ಮಿ ಭೇಟಿ ನೀಡಬಹುದು ಎಂದು ಹೇಳಲಾಗಿತ್ತು. ಇದೀಗ ವಿಜಯಲಕ್ಷ್ಮಿ ಜೈಲಿಗೆ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆಯೂ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾಗ ವಿಜಯಲಕ್ಷ್ಮಿ ಪ್ರತಿ ವಾರ ಜೈಲಿಗೆ ಬಂದು ದರ್ಶನ್‌ಗೆ ಸಮಾದಾನ ಹೇಳಿ ಧೈರ್ಯ ತುಂಬಿದ್ದರು. ಅದಲ್ಲದೆ ಜಾಮೀನು ಮೂಲಕ ಹೊರತರುವಲ್ಲಿ ವಿಜಯಲಕ್ಷ್ಮಿ ಸಾಕಷ್ಟು ಹೋರಾಟವನ್ನು ನಡೆಸಿದ್ದಾರೆ.
ದರ್ಶನ್ ಜೈಲಿಂದ್ದ ಬಂದ್ಮೇಲೂ ವಿಜಯಲಕ್ಷ್ಮಿ ಗಂಡನ ಜತೆ ರಾಜ್ಯದ ಹಾಗೂ ಹೊರ ರಾಜ್ಯದ ಫವರ್ ಫುಲ್ ದೇವಸ್ಥಾನಗಳಿಗೂ ಭೇಟಿ ನೀಡಿದ್ದರು.
ಇದೀಗ ಮತ್ತೇ ಜೈಲು ಸೇರಿರುವ ಪತಿಯನ್ನು ನೋಡಲು ವಿಜಯಲಕ್ಷ್ಮಿ ಟೆನ್ಷನ್‌ನಲ್ಲಿಯೇ ಜೈಲಿನತ್ತ ಹೆಜ್ಜೆ ಹಾಕಿದ್ದಾರೆ.