ಶೂಟಿಂಗ್ ವೇಳೆ ಪ್ರಾಣ ಪಣಕ್ಕಿಟ್ಟು ಸಿನಿಮಾ ದೃಶ್ಯಗಳಲ್ಲಿ ನಟಿಸಿದ ವಿಜಯ್ ಸಾಹಸ; ವಿಡಿಯೋ ವೈರಲ್

Webdunia
ಶನಿವಾರ, 17 ಅಕ್ಟೋಬರ್ 2020 (12:21 IST)
ಚೆನ್ನೈ : ಕಾಲಿವುಡ್ ನ ಖ್ಯಾತ ನಟ ವಿಜಯ್ ಅವರು ಪ್ರತಿಯೊಂದು ಚಿತ್ರದಲ್ಲೂ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ ಶೂಟಿಂಗ್ ವೇಳೆ ಎಲ್ಲರನ್ನೂ ಬೆರಗುಗೊಳಿಸುವಂತಹ ವಿಜಯ್ ಅವರ ಸಾಹಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು. ಈ ವಿಡಿಯೋದಲ್ಲಿ  ಇದುವರೆಗೆ ವಿಜಯ್ ನಟಿಸಿದ ಅನೇಕ ಚಿತ್ರಗಳಲ್ಲಿ  ಅವರೇ ಸ್ವತಃ ಡೋಪ್ ಇಲ್ಲದೆ ಅಪಾಯಕಾರಿ ದೃಶ್ಯಗಳಲ್ಲಿ ನಟಿಸಿದ್ದನ್ನು ಇದು ಒಳಗೊಡಿದೆ. ಅಲ್ಲದೇ  ‘ವೇಲಾಯುಥಮ್’ ಚಿತ್ರದ ಒಂದು ಹೋರಾಟದ ದೃಶ್ಯದಲ್ಲಿ 150 ಅಡಿ ಎತ್ತರದಲ್ಲಿ ಚಲಿಸುವ ರೈಲಿನಲ್ಲಿ ಸೇತುವೆಯ ಮೇಲೆ ವಿಜಯ್ ಸುತ್ತಿಗೆಯಿಂದ ಫೈಟ್ ಮಾಡುತ್ತಿದ್ದಾರೆ. ಇದನ್ನು ನೋಡಿ  ನಿರ್ದೇಶಕ ಮತ್ತು ಸ್ಟಂಟ್ ಮಾಸ್ಟರ್ ಆಶ್ಚರ್ಯಚಕಿತರಾಗಿದ್ದಾರೆ.

ಹಾಗೇ ಸೂಪರ್ ಹಿಟ್ ಚಿತ್ರ ‘ಕುಶಿ’ಯಲ್ಲಿ ವಿಜಯ್ ಅವರು ನ್ಯೂಜಿಲೆಂಡ್ ನ ಸೇತುವೆಯ  ಮೇಲೆ ಸ್ಟಂಟ್ ಮ್ಯಾನ್ ನ ಯಾವುದೇ ಸಹಾಯವಿಲ್ಲದೇ ಬಂಗೀ ಜಂಪಿಂಗ್  ಮಾಡುತ್ತಿರುವುದು ಕಂಡುಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments