Webdunia - Bharat's app for daily news and videos

Install App

ಕಣ್ಣೀರು ಹಾಕುತ್ತಲೇ ಪತ್ನಿಗೆ ಶಾಸ್ತ್ರ ಮಾಡಿದ ವಿಜಯ್ ರಾಘವೇಂದ್ರ

Webdunia
ಬುಧವಾರ, 9 ಆಗಸ್ಟ್ 2023 (09:00 IST)
Photo Courtesy: Instagram
ಬೆಂಗಳೂರು: ಹೃದಯಾಘಾತದಿಂದ ನಿಧನರಾಗಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹವನ್ನು ನಿನ್ನೆ ತಡರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ.

ಬಳಿಕ ನಿನ್ನೆ ತಡರಾತ್ರಿಯಿಂದ ಸ್ಪಂದನಾ ತವರು ಮನೆಯಲ್ಲಿ ಅಂತಿಮ ದರ್ಶನಕ್ಕಿಡಲಾಗಿದೆ. ಮೊದಲು ಮನೆಯೊಳಗೆ ಕರೆದುಕೊಂಡು ಶಾಸ್ತ್ರ ಮುಗಿಸಿದ ಬಳಿಕ ಮನೆ ಹೊರಗೆ ಅಂತಿಮ ದರ್ಶನಕ್ಕಿಡಲಾಗಿದೆ. ಈ ವೇಳೆ ನಟ ವಿಜಯ್ ರಾಘವೇಂದ್ರ ಮೃತದೇಹಕ್ಕೆ ಮಾಡಬೇಕಾದ ಕೆಲವು ಶಾಸ್ತ್ರಗಳನ್ನು ಕಣ್ಣೀರು ಹಾಕುತ್ತಲೇ ಮಾಡಿದ್ದಾರೆ.

ಸ್ಪಂದನಾಗೆ ಬಳೆ ತೊಡಿಸುವ ಶಾಸ್ತ್ರದ ವೇಳೆ ವಿಜಯ್ ತೀವ್ರ ದುಃಖಿತರಾಗಿದ್ದಾರೆ. ಬಳಿಕ ಪತ್ನಿಯ ಮೃತದೇಹದ ಸಮೀಪವೇ ಅತೀವ ದುಃಖದಿಂದ ಕುಳಿತಿದ್ದಾರೆ. ಇಂದು ಬೆಳಿಗ್ಗೆಯೇ ನಟ ಶಿವರಾಜ್ ಕುಮಾರ್, ಗಿರಿಜಾ ಲೋಕೇಶ್, ಶ್ರೀನಾಥ್, ಸುಧಾರಾಣಿ, ಅನುಪ್ರಭಾಕರ್, ಸಚಿವ ಪ್ರಿಯಾಂಕ್ ಖರ್ಗೆ, ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಅಲ್ಲದೆ, ದುಃಖತಪ್ತರಾಗಿರುವ ವಿಜಯ್ ರಾಘವೇಂದ್ರಗೆ ಸಾಂತ್ವನ ಹೇಳಿದ್ದಾರೆ.

ಇಂದು ಮಧ್ಯಾಹ್ನದ ಬಳಿಕ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನೆರವೇರಲಿದೆ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ಮುಂದಿನ ಸುದ್ದಿ
Show comments